ತನಗಿಂತ ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಹೆಣ್ಣು ಮಕ್ಕಳನ್ನು ಕೊಂದ ಪಾಪಿ ಮಹಿಳೆ! - Mahanayaka
1:06 PM Thursday 4 - December 2025

ತನಗಿಂತ ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಹೆಣ್ಣು ಮಕ್ಕಳನ್ನು ಕೊಂದ ಪಾಪಿ ಮಹಿಳೆ!

haryana woman poonam
04/12/2025

ಚಂಡೀಗಢ: ತನಗಿಂತ ಚೆನ್ನಾಗಿದ್ದಾರೆ ಎನ್ನುವ ಅಸೂಯೆಯಿಂದ ಮಹಿಳೆಯೊಬ್ಬಳು ಮೂವರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ  ಚಂಡೀಗಢದ ಪಾಣಿಪತ್‌ ಜಿಲ್ಲೆಯ ನೆಲ್ಲಾ ಗ್ರಾಮದಲ್ಲಿ ನಡೆದಿದೆ.

ಕೊಲೆಗಾತಿಯನ್ನು 32 ವರ್ಷದ ಪೂನಂ ಎಂದು ಗುರುತಿಸಲಾಗಿದೆ. ಈಕೆ ತನ್ನ ಕುಟುಂಬಸ್ಥರ ಮಕ್ಕಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಕಳೆದ 2 ವರ್ಷಗಳಲ್ಲಿ ಈಕೆ ಮೂವರು ಬಾಲಕಿಯರನ್ನು ಕೊಂದಿದ್ದಾಳೆ. ಕೊಲೆಗೆ ಕಾರಣ, ಅವರು ಸುಂದರವಾಗಿದ್ದರು ಎನ್ನುವುದೇ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಹತ್ಯೆಯಾದ ಬಾಲಕಿಯರು ಮಹಿಳೆಯ ಸಂಬಂಧಿಕರ ಮಕ್ಕಳೇ ಆಗಿದ್ದಾರೆ.

ಮೂರು ಹುಡುಗಿಯರನ್ನು ಕೂಡ ಈಕೆ ಪ್ರತ್ಯೇಕ ಸಂದರ್ಭಗಳಲ್ಲಿ ನೀರಿನ ತೊಟ್ಟಿಗಳಲ್ಲಿ ಮುಳುಗಿಸಿ ಕೊಂದಿದ್ದಳು. ಬಳಿಕ ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಳು ಮೂರನೇ ಹತ್ಯೆಯ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ.  ಇದರೊಂದಿಗೆ ಆಕೆಯ ಸೌಂದರ್ಯದ ಹಿಂದಿದ್ದ ವಿಕೃತ, ಘೋರ ರೂಪ ಬಯಲಾಗಿದೆ.

2023ರಲ್ಲಿ, ಸೋನಿಪತ್‌ನ ಭವಾರ್‌’ ಗ್ರಾಮದಲ್ಲಿರುವ ತಮ್ಮ ಮನೆಯ ನೀರಿನ ತೊಟ್ಟಿಯಲ್ಲಿ ತನ್ನ ಅತ್ತಿಗೆಯ ಒ೦ಬತ್ತು ವರ್ಷದ ಮಗಳನ್ನು ಮುಳುಗಿಸಿ ಕೊಂದಿದ್ದಳು. ಇದಾದ ನಂತರ, 2025ರ ಆಗಸ್ಟ್‌ನಲ್ಲಿ, ಸೇವಾ ಹಳ್ಳಿಯಲ್ಲಿ ತನ್ನ ಸೋದರ ಸಂಬಂಧಿಯ ಅರು ವರ್ಷದ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಕೊನೆಯದಾಗಿ ಪಾಣಿಪತ್‌ ಜಿಲ್ಲೆಯ ನೆಲ್ಲಾ ಗ್ರಾಮದಲ್ಲಿ ತನ್ನ ಸಂಬಂಧಿಕರ ಮದುವೆ ಮನೆಯಲ್ಲಿ 6 ವರ್ಷದ ಬಾಲಕಿಯನ್ನು ನೀರಿನ ಪ್ಲಾಸ್ಟಿಕ್ ಟಬ್ ನಲ್ಲಿ ಮುಳುಗಿಸಿ ಕೊಂದಿದ್ದಳು.

ಅಂದು ಎಲ್ಲರೂ ಮದುವೆಯ ಸಂಭ್ರಮದಲ್ಲಿದ್ದರು. 6 ವರ್ಷದ ವಿಧಿ ಎನ್ನುವ ಬಾಲಕಿ ಸೋಮವಾರ ನಾಪತ್ತೆಯಾಗಿದ್ದಳು. ಹುಡುಕಾಟ ನಡೆಸಿದ ವೇಳೆ ಬಾತ್ ರೂಮ್ ನಲ್ಲಿ ಟಬ್ ನಲ್ಲಿ ದೇಹ ಮತ್ತು ಪಾದ ಹೊರಗಿದ್ದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ ಅನುಮಾನ ವ್ಯಕ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿದ ವೇಳೆ ಹುಡುಗಿಯ ಚಿಕ್ಕಮ್ಮ ಪೂನಂ, ಬಾಲಕಿಯನ್ನು ಟಬ್ ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಪೂನಂಗೆ ಸುಂದರವಾದ ಹುಡುಗಿಯರನ್ನು ಕಂಡರೆ ಆಗುತ್ತಿರಲಿಲ್ಲ, ಯಾರಾದರೂ ತನಗಿಂತ ಸುಂದರವಾಗಿದ್ದರೆ, ಅವರ ಮೇಲೆ ದ್ವೇಷಕಾರುತ್ತಿದ್ದಳು. ಅವರು ದೊಡ್ಡವರಾದ ನಂತರ ತನಗಿಂತ ಸುಂದರವಾಗುತ್ತಾರೆ ಎಂದು ಅಸೂಯೆ ಪಡುತ್ತಿದ್ದಳು. ಮದುವೆಯಾದ ನಂತರ ಪೂನಂ ಈ ರೀತಿಯ ವಿಚಿತ್ರ ವರ್ತನೆಯನ್ನು ತೋರಲು ಆರಂಭಿಸಿದ್ದಳು. ಇನ್ನೂ ಸರಣಿ ಸಾವುಗಳಿಂದ ಸಂಬಂಧಿಕರಿಗೆ ತನ್ನ ಮೇಲೆ ಅನುಮಾನ ಬರಬಾರದು ಎನ್ನುವ ಕಾರಣಕ್ಕೆ ಆಕೆಯ 3 ವರ್ಷದ ಮಗನನ್ನು ಕೂಡ ಆಕೆ ಕೊಂದಿದ್ದಳು ಎನ್ನುವುದು ಬಯಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ