ಹುಟ್ಟುಹಬ್ಬಕ್ಕೆಂದು ಮನೆಗೆ ಕರೆದು ಯುವತಿಯ ಮೇಲೆ ನೀಚ ಕೃತ್ಯ! - Mahanayaka
4:33 AM Wednesday 22 - October 2025

ಹುಟ್ಟುಹಬ್ಬಕ್ಕೆಂದು ಮನೆಗೆ ಕರೆದು ಯುವತಿಯ ಮೇಲೆ ನೀಚ ಕೃತ್ಯ!

stop rape
07/09/2025

ಕೋಲ್ಕತ್ತಾ:  ಹುಟ್ಟುಹಬ್ಬ ಆಚರಣೆಗೆಂದು ಯುವತಿಯನ್ನು ಮನೆಗೆ ಕರೆದು ಇಬ್ಬರು ಯುವಕರು ಯುವತಿಯ ಮೇಲೆ ನೀಚ ಕೃತ್ಯ ಎಸಗಿ ಪರಾರಿಯಾಗಿರುವ ಘಟನೆ ಕೋಲ್ಕತ್ತಾದ ರೀಜೆಂಟ್ ಪಾರ್ಕ್‌ ಬಳಿಯ ಮನೆಯೊಂದರಲ್ಲಿ ನಡೆದಿದೆ.

ಹರಿದೇವ್‌ ಪುರದ ನಿವಾಸಿಯಾದ ಸಂತ್ರಸ್ತೆಗೆ ಕೆಲವು ತಿಂಗಳುಗಳ ಹಿಂದೆ ಚಂದನ್  ಮಲಿಕ್  ಎಂಬಾತನ ಪರಿಚಯವಾಗಿತ್ತು. ಆತ ದಕ್ಷಿಣ ಕೋಲ್ಕತ್ತಾದ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ಸಂತ್ರಸ್ತೆಗೆ ಪರಿಚಯ ಮಾಡಿಕೊಂಡಿದ್ದನು. ಆತನೊಂದಿಗೆ ಆತನ ಸ್ನೇಹಿತ ದೀಪ್ ಕೂಡ ಪರಿಚಯವಾಗಿತ್ತು.

ಚಂದನ್ ತನ್ನ ಹುಟ್ಟುಹಬ್ಬ ಆಚರಣೆ ಮಾಡುವ ನೆಪದಲ್ಲಿ ಯುವತಿಯನ್ನು ಮನೆಗೆ ಕರೆದಿದ್ದ. ಹೀಗಾಗಿ ಆತನ ಮನೆಗೆ ಯುವತಿ ಹೋಗಿದ್ದಳು. ಊಟದ ನಂತರ  ಯುವತಿ ಹೊರಡಲು ಮುಂದಾಗುತ್ತಿದ್ದಂತೆಯೇ ಆಕೆಯನ್ನು ತಡೆದ ಇಬ್ಬರೂ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಶನಿವಾರ ಸೆ.6ರಂದು ಆರೋಪಿಗಳಿಂದ ತಪ್ಪಿಸಿಕೊಂಡ ಸಂತ್ರಸ್ತೆ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ.  ಆರೋಪಿಗಳು ಪೂಜಾ ಸಮಿತಿಯಲ್ಲಿ ಯುವತಿಯನ್ನು ಸೇರಿಸಿಕೊಳ್ಳುವುದಾಗಿ ನಂಬಿಸಿದ್ದರು ಎಂದು ತಿಳಿದು ಬಂದಿದೆ.  ಸದ್ಯ ಆರೋಪಿಗಳ ಬಂಧನಕ್ಕೆ  ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ