2013ರ ಮುಝಫರ್ ನಗರ ಹಿಂಸಾಚಾರ ಪ್ರಕರಣ: 19 ಮಂದಿ ಪ್ರಮುಖರ ವಿರುದ್ಧ ದೋಷಾರೋಪಣೆ - Mahanayaka
5:50 AM Wednesday 20 - August 2025

2013ರ ಮುಝಫರ್ ನಗರ ಹಿಂಸಾಚಾರ ಪ್ರಕರಣ: 19 ಮಂದಿ ಪ್ರಮುಖರ ವಿರುದ್ಧ ದೋಷಾರೋಪಣೆ

08/01/2025


Provided by

2013ರಲ್ಲಿ ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಾಸಕರು ಮತ್ತು ಸಂಸದರ ನ್ಯಾಯಾಲಯವು 19 ಮಂದಿ ಪ್ರಮುಖರ ವಿರುದ್ಧ ದೋಷಾರೋಪಣೆ ಮಾಡಿದೆ. 2013 ರಲ್ಲಿ ನಡೆದ ಮಹಾಪಂಚಾಯತ್ ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲಿದೆ. ಇವರಲ್ಲಿ ಉತ್ತರ ಪ್ರದೇಶದ
ಸಚಿವ ಕಪಿಲ್ ದೇವ್ ಅಗರ್ವಾಲ್, ಸಂಸದ ಹರೇಂದ್ರ ಮಲಿಕ್, ಮಾಜಿ ಸಚಿವ ಸಂಜೀವ್ ಬಲಿಯಾನ್, ವಿಶ್ವ ಹಿಂದು ಪರಿಷತ್ ನಾಯಕಿ ಸಾದ್ವಿ ಪ್ರಾಚಿ ಮತ್ತು ಸ್ವಾಮಿ ಯತಿ ನರಸಿಂಗಾ ನಂದ ಅವರು ಸೇರಿದ್ದಾರೆ.

ಹಿಂದೂ ಮಹಾ ಪಂಚಾಯತ್ ನ ಸಂದರ್ಭದಲ್ಲಿ ಈ ಆರೋಪಿಗಳು ಅತ್ಯಂತ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ. ಈ ಹೇಳಿಕೆಗಳು ಆ ಬಳಿಕ ಹಿಂಸೆಗೆ ಕಾರಣವಾಯಿತು.

2013 ಆಗಸ್ಟ್ 31 ರಂದು ಈ ಮಹಾ ಪಂಚಾಯತ್ ನಡೆದಿತ್ತು. ಹಿಂಸಾಚಾರದ ಹಿನ್ನೆಲೆಯಲ್ಲಿ 21 ಮಂದಿಯ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಆ ಬಳಿಕದಿಂದ ಈ ಪ್ರಕರಣ ಸಂಸದರು ಮತ್ತು ಶಾಸಕರ ನ್ಯಾಯಾಲಯದಲ್ಲಿದೆ. ಜನವರಿ 31ರಂದು ಮುಂದಿನ ವಿಚಾರಣೆ ನಡೆಯಲಿದೆ. ಮುಜಫರ್ ನಗರ್ ಹಿಂಸಾಚಾರದಲ್ಲಿ 60 ಮಂದಿ ಸಾವಿಗೀಡಾಗಿದ್ದರು ಮತ್ತು 60,000 ಮಂದಿ ನೆಲೆ ಕಳಕೊಂಡಿದ್ದರು. ಇಬ್ಬರ ನಡುವಿನ ಸಣ್ಣ ಘರ್ಷಣೆಯು ಆ ಬಳಿಕ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣವಾಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ