ಟ್ರೆಡ್‌ ಮಿಲ್‌ ನಲ್ಲಿ ಓಡುತ್ತಿದ್ದ ವೇಳೆ ನಡೀತು ಅವಘಡ: ಜಿಮ್ ನಲ್ಲಿ ವಿದ್ಯುತ್ ಶಾಕ್‌ನಿಂದ ಯುವಕ ಸಾವು - Mahanayaka

ಟ್ರೆಡ್‌ ಮಿಲ್‌ ನಲ್ಲಿ ಓಡುತ್ತಿದ್ದ ವೇಳೆ ನಡೀತು ಅವಘಡ: ಜಿಮ್ ನಲ್ಲಿ ವಿದ್ಯುತ್ ಶಾಕ್‌ನಿಂದ ಯುವಕ ಸಾವು

20/07/2023

ದೆಹಲಿಯ ಜಿಮ್‌ ನಲ್ಲಿ ಟ್ರೆಡ್‌ಮಿಲ್‌ ನಲ್ಲಿ ಓಡುತ್ತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ‌ ಘಟನೆ ನಡೆದಿದೆ. ಜಿಮ್‌ ಮಾಲಿಕರ ನಿರ್ಲಕ್ಷ್ಯದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಪೊಲೀಸರು ಜಿಮ್ ಮಾಲೀಕನನ್ನು ಬಂಧಿಸಿದ್ದಾರೆ.

24 ವರ್ಷದ ಸಾಕ್ಷಮ್ ಪೃಥಿ ಎಂಬ ಯುವಕ ಮೃತಪಟ್ಟಿದ್ದು, ಬಿಟೆಕ್ ಪದವೀಧರನಾಗಿರುವ ಈತ ಗುರುಗ್ರಾಮ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

ಜಿಮ್‌ನಲ್ಲಿ ಟ್ರೆಡ್‌ ಮಿಲ್‌ ನಲ್ಲಿ ಓಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ವಿಶ್ರಾಂತಿಗೆಂದು ಕೂರುತ್ತಿದ್ದಂತೆ ಸಾಕ್ಷಮ್‌ ಕುಸಿದು ಬಿದ್ದಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿನ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ವಿದ್ಯುತ್‌ ಶಾಕ್‌ ಕಾರಣ ಎಂದು ಕಂಡು ಬಂದಿದ್ದು, ನಿರ್ಲಕ್ಷ್ಯದ ಕಾರಣ ನೀಡಿ ಜಿಮ್‌ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ