ಪ್ರಚಾರಕ್ಕೆ ತೆರಳಿದ್ದ ಕೋಟಾ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂ. ನೀಡಿದ ಚುರುಮುರಿ ವ್ಯಾಪಾರಿ

ಚಿಕ್ಕಮಗಳೂರು: ಚುರುಮುರಿ ವ್ಯಾಪಾರಿಯೊಬ್ಬರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಚುನಾವಣಾ ಖರ್ಚಿಗಾಗಿ ಹಣ ನೀಡಿರುವ ಘಟನೆ ನಡೆಯಿತು.
ಚುರುಮುರಿ ವ್ಯಾಪಾರಿ ಲೋಕೇಶ್ ಬಾಬು ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ 25 ಸಾವಿರ ರೂಪಾಯಿ ಹಣವನ್ನು ಚುನಾವಣಾ ಖರ್ಚಿಗಾಗಿ ನೀಡಿದರು.
ಇಂದು ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್ ನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಇಲ್ಲಿನ ಚುರುಮುರಿ ವ್ಯಾಪಾರಿ ಲೋಕೇಶ್ ಎಲೆ–ಅಡಿಕೆ–ಬಾಳೆಹಣ್ಣುಗಳ ತಾಂಬೂಲದಲ್ಲಿ 25 ಸಾವಿರ ರೂಪಾಯಿ ಹಣವನ್ನು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದರು.
ಹಣ ನೀಡಿದ ಬಳಿಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವಂತೆ ಲೋಕೇಶ್ ಹಾರೈಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth