ಬಿಹಾರದಲ್ಲಿ ಧಗಧಗನೇ ಹೊತ್ತಿ ಉರಿದ ಕಟ್ಟಡ: ಮೂವರು ಸಾವು - Mahanayaka

ಬಿಹಾರದಲ್ಲಿ ಧಗಧಗನೇ ಹೊತ್ತಿ ಉರಿದ ಕಟ್ಟಡ: ಮೂವರು ಸಾವು

25/11/2023


Provided by

ಬಿಹಾರದ ಮೋತಿಹರಿಯಲ್ಲಿ ಶನಿವಾರ ಎರಡು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ವಿವರಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯ ವೀಡಿಯೊದಲ್ಲಿ ಬೆಂಕಿಯಿಂದ ಆವೃತವಾದ ಕಟ್ಟಡದಿಂದ ಹೊಗೆ ಹೊರಸೂಸುತ್ತಿರುವುದನ್ನು ತೋರಿಸಿದೆ.

ಇನ್ನು ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ತಲುಪಿದವು.
ಏತನ್ಮಧ್ಯೆ, ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನಗಳನ್ನು ಮಾಡಿದರು.

ಇತ್ತೀಚಿನ ಸುದ್ದಿ