ಗಾಳಿಗಾಗಿ ಪರದಾಟ: ಕುಸಿದ ಗಾಳಿ; ವಿಶ್ವದಲ್ಲೇ ಅತ್ಯಂತ ಕಳಪೆ ರಾಜಧಾನಿ ಎಂಬ ಕುಖ್ಯಾತಿಗೆ ದಿಲ್ಲಿ ಫಿಕ್ಸ್..!
06/11/2023
ದೇಶದ ರಾಜಧಾನಿ ನವದೆಹಲಿಯಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿರುವ ಹಿನ್ನೆಲೆಯಲ್ಲಿ ನವದೆಹಲಿಯು ವಿಶ್ವದಲ್ಲೇ ಅತ್ಯಂತ ಕಳಪೆ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಸೋಮವಾರ ಬೆಳಗ್ಗೆ ದೆಹಲಿಯ ಎಕ್ಯುಐ ಮಟ್ಟ ಸುರಕ್ಷಿತ ಮಟ್ಟಕ್ಕಿಂತ ಎಂಟು ಪಟ್ಟು ಕುಸಿತ ಕಂಡಿದೆ.
ವಾಹನಗಳ ದಟ್ಟಣೆ, ರಾಜಧಾನಿ ವಲಯದ ರಾಜ್ಯಗಳಲ್ಲಿ ಕಳೆ ಸುಡುತ್ತಿರುವುದು, ಕೈಗಾರಿಕೆಗಳಿಂದ ಬರುತ್ತಿರುವ ಹೊಗೆಯಿಂದ ದೆಹಲಿ ತೀವ್ರವಾಗಿ ವಾಯುಮಾಲಿನ್ಯಕ್ಕೀಡಾಗಿದೆ. ನವೆಂಬರ್ 10 ರವರೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಸಾಮಾನ್ಯ ಜನರೂ ಸಹ ಮಾಸ್ಕ್ ಇಲ್ಲದೆ ಹೊರಗೆ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದ್ದು, ಅನಗತ್ಯ ಸಂಚಾರವನ್ನು ತಪ್ಪಿಸುವಂತೆ ಸರ್ಕಾರ ಸಾರ್ವಜನಿಕರಿಗೆ ನಿರ್ದೇಶನ ನೀಡಿದೆ.
ಇದೇ ವೇಳೆ ದೆಹಲಿ ವಾಯುಮಾಲಿನ್ಯದ ಬಗ್ಗೆ ಎಎಪಿ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಕೂಡ ಪ್ರಾರಂಭವಾಗಿದೆ.




























