ಡ್ರೋಣ್ ಕ್ಯಾಮರಾದಲ್ಲಿ ಪತ್ತೆಯಾಯ್ತು 3 ಚಿರತೆಗಳು: ಆತಂಕದಲ್ಲಿ ಜನ

04/09/2023
ಚಿಕ್ಕಮಗಳೂರು: ಪ್ರಸಿದ್ಧ ಶಿವಗಂಗಾ ಗಿರಿಯಲ್ಲಿ ಮೂರು ಚಿರತೆಗಳು ಪತ್ತೆಯಾಗಿದ್ದು, ಡ್ರೋನ್ ಕ್ಯಾಮರಾದಲ್ಲಿ ಚಿರತೆಗಳ ಚಲನ-ವಲನ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಶಿವಗಂಗಾ ಗಿರಿಯ ಕೇಳಗಿರುವ ದೇವಾಲಯಲ್ಲಿನ ಮದುವೆ ಕಾರ್ಯಕ್ರಮದ ವೇಳೆ ಡ್ರೋಣ್ ಕ್ಯಾಮರಾ ಮೂಲಕ ವಿಡಿಯೋ ಮಾಡಲಾಗುತ್ತಿತ್ತು. ಈ ವೇಳೆ ಗಿರಿಯ ತುದಿಯಲ್ಲಿ ಮೂರು ಚಿರತೆಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನೂ ಶಿವಗಂಗಾಗಿರಿ ಬೆಟ್ಟದಲ್ಲಿ ಚಿರತೆಗಳು ಇವೆ ಎನ್ನುವ ಸುದ್ದಿ ಇಲ್ಲಿನ ಗ್ರಾಮಸ್ಥರನ್ನ ಭಯಭೀತಗೊಳಿಸಿದೆ. ಇಲ್ಲಿನ ನಿವಾಸಿಗಳು ಕೆಲಸಕ್ಕೆ ಹೋಗಲು ಕೂಡ ಭಯಪಡುತ್ತಿದ್ದಾರೆ. ಕಡೂರು ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಚಿರತೆಗಳನ್ನ ಕೂಡಲೇ ಅರಣ್ಯ ಇಲಾಖೆ ಸೆರೆ ಹಿಡಿಯಬೇಕು ಎಂದು ಇಲ್ಲಿನ ಜನರು ಆಗ್ರಹಿಸಿದ್ದಾರೆ.