ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ? - Mahanayaka
10:30 AM Saturday 23 - August 2025

ತ್ರಿಸ್ಟಾರ್ ಹೊಟೇಲ್ ನಲ್ಲಿ 8 ತಿಂಗಳು ತಂಗಿದ | 25 ಲಕ್ಷ ರೂ. ಬಿಲ್ ಆದ ಬಳಿಕ ಆತ ಮಾಡಿದ್ದೇನು ಗೊತ್ತಾ?

hotel
03/09/2021


Provided by

ಮುಂಬೈ:  ವ್ಯಕ್ತಿಯೋರ್ವ ಡಬಲ್ ಬೆಡ್ ರೂಮ್ ಬುಕ್ ಮಾಡಿಕೊಂಡು 8 ತಿಂಗಳ ಕಾಲ ಹೊಟೇಲ್ ವೊಂದರಲ್ಲಿ ತಂಗಿದ್ದು, ಸುಮಾರು 25 ಲಕ್ಷ  ಮೊತ್ತದ ಬಿಲ್ ಆದ ಬಳಿಕ ಹೊಟೇಲ್ ನಿಂದ ಸದ್ದಿಲ್ಲದೇ ಪರಾರಿಯಾಗಿರುವ ಘಟನೆ ಮಹಾರಾಷ್ಟ್ರದ ನವಿಮುಂಬೈ ನಲ್ಲಿ ನಡೆದಿದೆ.

ಅಂಧೇರಿ ಮೂಲದ 43 ವರ್ಷ ವಯಸ್ಸಿನ ಮುರಳಿ ಕಾಮತ್ ನವೆಂಬರ್ 23, 2020ರಂದು ಖಾರ್ಘರ್ ಪ್ರದೇಶದ ತ್ರಿಸ್ಟಾರ್ ಹೊಟೇಲ್ ನ ಎರಡು ರೂಮ್ ಗಳನ್ನು ಬಾಡಿಗೆ ಪಡೆದುಕೊಂಡಿದ್ದು, ಆತನ 12 ವರ್ಷದ ಮಗ ಕೂಡ ಈ ಕೊಠಡಿಯಲ್ಲಿ ವಾಸವಿದ್ದ. ಚಲನ ಚಿತ್ರೋದ್ಯಮಕ್ಕಾಗಿ ಆತ ಇಲ್ಲಿ ರೂಮ್ ಬುಕ್ ಮಾಡಿರುವುದಾಗಿ ಹೇಳಿದ್ದ. ಎರಡು ಕೊಠಡಿಗಳ ಪೈಕಿ ಒಂದನ್ನು ಅಧಿಕೃತ ಸಭೆ ಹಾಗೂ ಇನ್ನೊಂದನ್ನು ವೈಯಕ್ತಿಕ ಕೆಲಸಗಳಿಗಾಗಿ ಆರೋಪಿಯು ಬಳಸಿಕೊಂಡಿದ್ದ.

ಇನ್ನೂ ಹೊಟೇಲ್ ಗೆ ಬಂದ ಬಳಿಕ ಹಣವನ್ನು ತಿಂಗಳ ಅಂತ್ಯದೊಳಗೆ ಪಾವತಿಸುವುದಾಗಿ ಅವರು ಹೇಳಿದ್ದರು. ಅದಕ್ಕಾಗಿ ತಮ್ಮ ಪಾಸ್ ಪೋರ್ಟ್ ನ್ನು ಹೊಟೇಲ್ ಮಾಲಿಕನಿಗೆ ಸಲ್ಲಿಸಿದ್ದರು. ಆದರೆ ಜುಲೈ 16ರವರೆಗೂ ಆರೋಪಿ ಪಾವತಿಸಿರಲಿಲ್ಲ.

ಜುಲೈ 17ರಂದು ಮುರಳೀ ಕಾಮತ್ ಹಾಗೂ ಆತನ ಮಗ ಶೌಚಾಲಯದ ಕಿಟಕಿಯ ಮೂಲಕ ಹೊಟೇಲ್ ನಿಂದ ಪರಾರಿಯಾಗಿದ್ದಾರೆ. ಹೊಟೇಲ್ ನಿಂದ ಪರಾರಿಯಾಗುವ ವೇಳೆ ತಮ್ಮ ಮೊಬೈಲ್ ಹಾಗೂ  ಲ್ಯಾಪ್ ಟಾಪ್ ನ್ನು ಕೊಠಡಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಘಟನೆ ಜುಲೈ 17ರಂದು ನಡೆದಿದ್ದರೂ, ಇನ್ನೂ ಆರೋಪಿಯ ಬಂಧನ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಗಂಡ, ಹೆಂಡತಿ ನಡುವೆ ರಾಜಿ ಪಂಚಾಯಿತಿ ವೇಳೆ ಮನ ಬಂದಂತೆ ಗುಂಡು ಹಾರಿಸಿದ ನಿವೃತ್ತ ಸೈನಿಕ | ಇಬ್ಬರು ಸಾವು

ಭಾಷಣದ ವೇಳೆ ಊಟಕ್ಕೆ ಮುಗಿಬಿದ್ದ ಮಹಿಳಾ ಕಾರ್ಯಕರ್ತೆಯರು | ಬೇಸರ ವ್ಯಕ್ತಪಡಿಸಿದ ದೇವೇಗೌಡರು

ಭಾರತದ ಬಡ ಮುಸ್ಲಿಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು | ಓವೈಸಿ ಕಿಡಿ

ಚಿರುಪುತ್ರನ ಹೆಸರು ಬಹಿರಂಗಗೊಳಿಸಿದ ಮೇಘನಾ ರಾಜ್!

ರಾತ್ರಿ 3 ಗಂಟೆಗೆ ಎದ್ದು ಎದೆಯನ್ನು ಒತ್ತಿ ಹಿಡಿದಂತಾಗುತ್ತಿದೆ ಎಂದು ಅಮ್ಮನಿಗೆ ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಖಾಸಗಿ ವಾಹಿನಿ, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮಗಳಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಸುದ್ದಿಗಳನ್ನು ಹರಡಲಾಗುತ್ತಿದೆ | ಸುಪ್ರೀಂ ಕೋರ್ಟ್ ಕಳವಳ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಪಿಎಸ್ ಐ ಅರ್ಜುನ್ ನನ್ನು ಬಂಧಿಸಿದ ಸಿಐಡಿ ಪೊಲೀಸರು

ಇತ್ತೀಚಿನ ಸುದ್ದಿ