ಐತಿಹಾಸಿಕ ಹಂಪಿಯಲ್ಲಿ ನಡೆಯಲಿದೆ ಸಂಸ್ಕೃತಿ ಕಾರ್ಯಕಾರಿ ಗುಂಪಿನ 3ನೇ ಸಭೆ: ಜಿ20 ಶೃಂಗಸಭೆ ನಿಮಿತ್ತ ನಡೆಯಲಿದೆ ಸ್ಪೆಷಲ್ ಮೀಟಿಂಗ್

ಇದು ಕನ್ನಡಿಗರಿಗೆ ಖುಷಿಯ ವಿಚಾರ. ಹೌದು. ಕರ್ನಾಟಕ ರಾಜ್ಯದ
ಐತಿಹಾಸಿಕ ಹಂಪಿಯಲ್ಲಿ ಜಿ20 ಶೃಂಗಸಭೆ ನಿಮಿತ್ತ ಜುಲೈ 12ರವರೆಗೆ ಸಂಸ್ಕೃತಿ ಕಾರ್ಯಕಾರಿ ಗುಂಪಿನ 3ನೇ ಸಭೆ ನಡೆಯಲಿದೆ. ಜಿ20 ಗುಂಪಿನ ಸದಸ್ಯ ದೇಶಗಳು, ಅತಿಥಿ ದೇಶಗಳು ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳು ಮತ್ತು ನಿಯೋಗಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಒಟ್ಟು 29 ದೇಶಗಳಿಂದ 50 ಪ್ರತಿನಿಧಿಗಳು ಇದರಲ್ಲಿ ಇರಲಿದ್ದಾರೆ. ಇಂದು ನಡೆಯುವ ಉದ್ಘಾಟನೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ, ಸಂಸ್ಕೃತಿ ಖಾತೆಯ ರಾಜ್ಯ ಸಚಿವ ಅರ್ಜುನ್ ಮೇಘವಾಲ್ ಮತ್ತು ಮೀನಾಕ್ಷಿ ಲೇಖಿ ಅವರು ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಸಂಸ್ಕೃತಿ ಕಾರ್ಯಕಾರಿ ಗುಂಪಿನ ಹಿಂದಿನ ಎರಡು ಸಭೆಗಳು ಕಜುರಾವೋ ಮತ್ತು ಭುವನೇಶ್ವರದಲ್ಲಿ ನಡೆದಿದ್ದವು. ವಾರಾಣಸಿಯಲ್ಲಿ ನಾಲ್ಕನೇ ಸಿಡಬ್ಲ್ಯುಜಿ ಸಭೆ ನಡೆಯುತ್ತದೆ. ಸೆಪ್ಟಂಬರ್ನಲ್ಲಿ ಜಿ20 ಶೃಂಗಸಭೆ ನಡೆಯುತ್ತಿದ್ದು ಅದರ ನಿಮಿತ್ತ ಕಳೆದ ಕೆಲ ತಿಂಗಳಿಂದ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಪೂರಕ ಸಭೆಗಳು ನಡೆಯುತ್ತಾ ಬಂದಿವೆ. ಬೆಂಗಳೂರಿನಲ್ಲೂ ಸಭೆಗಳು ನಡೆದಿದ್ದವು.
ಕಲ್ಚರ್ ವರ್ಕಿಂಗ್ ಗ್ರೂಪ್ಗೆ ನಾಲ್ಕು ಆದ್ಯತೆಗಳನ್ನು ಕೊಡಲಾಗಿದೆ. ಸಾಂಸ್ಕೃತಿಕ ಆಸ್ತಿಗಳ ರಕ್ಷಣೆ, ಪರಂಪರೆ ಮುಂದುವರಿಕೆ, ಸಾಂಸ್ಕೃತಿಕ ಮತ್ತು ಸೃಜನಶೀಲ ಉದ್ಯಮಗಳ ಬೆಳವಣಿಗೆ, ಸಂಸ್ಕೃತಿಯ ರಕ್ಷಣೆ ಮತ್ತು ಪ್ರಚಾರಕ್ಕೆ ತಂತ್ರಜ್ಞಾನದ ಬಳಕೆ ಈ ನಾಲ್ಕು ವಿಚಾರಗಳನ್ನು ಆದ್ಯತೆಯಾಗಿ ಪರಿಗಣಿಸುವಂತೆ ಜಿ20ಯ ಸಂಸ್ಕೃತಿ ಕಾರ್ಯಕಾರಿ ಗುಂಪಿಗೆ ತಿಳಿಸಲಾಗಿದೆ.
ಜಿ20 ಸಿಡಬ್ಲ್ಯುಜಿ ಸಭೆಯ ಪ್ರತಿನಿಧಿಗಳಿಗೆ ಹಂಪಿ ಪರಿಚಯ
ಭಾರತದ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗುವ ವಿಜಯನಗರ ಅರಸರಿಗೆ ರಾಜಧಾನಿಯಾದ ಹಂಪಿಯನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳ ಎಂದು ಘೋಷಿಸಿದೆ. ಹಂಪಿಯ ಅಂದಿನ ವೈಭವ ಸ್ಥಿತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿವಿಧ ದೇಶಗಳ ಪ್ರತಿನಿಧಿಗಳಿಗೆ ತಿಳಿಸಲಾಗುತ್ತದೆ.
ಹಂಪಿಯಲ್ಲಿರುವ ಡಿಜಿಟಲ್ ಮ್ಯೂಸಿಯಂಗೆ ಭೇಟಿ, ಗಂಜೀಫ ಕಲೆ, ಬಿದರಿ ಕಲೆ, ಕಿನ್ಹಾಳ ಕರಕುಶಲ ತಜ್ಞರ ಜೊತೆ ಈ ಪ್ರತಿನಿಧಿಗಳು ಸಂವಾದಿಸಲಿದ್ದಾರೆ. ಹಾಗೆಯೇ, ಲಂಬಾಣಿ ಸಮುದಾಯದ ಕುಶಲಕರ್ಮಿಗಳ ಭೇಟಿಯೂ ಆಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw