ಟ್ರಕ್ ಗೆ ಡಿಕ್ಕಿ ಹೊಡೆದ ಮತ್ತೊಂದು ಟ್ರಕ್: ಸರಣಿ ಅಪಘಾತಕ್ಕೆ ನಾಲ್ವರು ಬಲಿ

ಧರ್ಮಪುರಿ: ನಾಲ್ಕು ವಾಹನಗಳ ನಡುವೆ ನಡೆದ ಭೀಕರ ಸರಣಿ ಅಪಘಾತವೊಂದರಲ್ಲಿ ನಾಲ್ವರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ.
ವೇಗವಾಗಿ ಬಂದ ಟ್ರಕ್ ವೊಂದು ಇನ್ನೊಂದು ಟ್ರಕ್ ಗೆ ಡಿಕ್ಕಿ ಹೊಡೆದಿದ್ದು, ಇದು ಸರಣಿ ಅಪಘಾತಕ್ಕೆ ಕಾರಣವಾಗುತ್ತದೆ. ಈ ಎರಡು ಲಾರಿಗಳ ನಡುವೆ ಕಾರು ಸಿಲುಕಿಕೊಂಡಿದ್ದು ಸ್ಥಳದಲ್ಲೇ ಕಾರು ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ಕಾರಣವಾದ ಟ್ರಕ್ ಸೇತುವೆಯಿಂದ ಕೆಳಗೆ ಉರುಳಿದ್ದು, ಈ ವೇಳೆ ವಾಹನಗಳಿಗೆ ಬೆಂಕಿ ಹತ್ತಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ 2 ಲಕ್ಷ ರೂಪಾಯಿ ಘೋಷಿಸಿದ್ದು, ಘಟನೆಯಲ್ಲಿ ಗಾಯಗೊಂಡ 8 ಜನರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಅಪಘಾತ ನಡೆಯುತ್ತಿದ್ದಂತೆಯೇ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಥಳದಲ್ಲಿ ಅಗ್ನಿಶಾಮಕದಳ ಮತ್ತು ಇತರ ತುರ್ತು ಸೇವೆಗಳನ್ನು ತಕ್ಷಣದಲ್ಲಿ ಒದಗಿಸಲಾಯಿತು.
More the reason why we are insisting on the speedy implementation of the Sanctioned elevated highway at Thoppur Ghat section in Dharmapuri.
These are the visuals of today’s accident at Thoppur Ghat.@NHAI_Official @nitin_gadkari pic.twitter.com/l6QHVp4M3i
— Dr.Senthilkumar.S (@DrSenthil_MDRD) January 24, 2024