ಈ 5 ಕಾರಣಗಳಿಗಾಗಿ ಜೋಳದ ರೊಟ್ಟಿಯನ್ನು ಸೇವಿಸಲೇ ಬೇಕು!

ಹಳ್ಳಿಗಾಡಿನ ಜೋಳದ ರೊಟ್ಟಿಗಳು(Jowar Rotis) ನಿಮ್ಮ ತಟ್ಟೆಯಲ್ಲಿ ಸದಾ ಇದ್ದರೆ, ಆರೋಗ್ಯ ಕೂಡ ನಿಮ್ಮ ಜೊತೆಗೆ ಸದಾ ಇರುತ್ತದೆ. ನೀವು ಒಂದೇ ರೀತಿಯ ಆಹಾರವನ್ನು ಸೇವನೆ ಮಾಡುತ್ತಿದ್ದರೆ, ಜೋಳವನ್ನೂ ನಿಮ್ಮ ಆಹಾರದಲ್ಲಿ ಸೇವನೆ ಮಾಡುವ ಮೂಲಕ ಒಂದು ಬದಲಾವಣೆಯನ್ನು ಮಾಡಿಕೊಳ್ಳಿ, ಜೋಳದ ರೊಟ್ಟಿಯನ್ನು ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವನೆ ಮಾಡುತ್ತಾರೆ. ಜೋಳದ ರೊಟ್ಟಿಯನ್ನು ಯಾಕೆ ಸೇವನೆ ಮಾಡಬೇಕು? ಅದರ ಪ್ರಯೋಜನಗಳೇನು ಎನ್ನುವುದನ್ನು ತಿಳಿಯೋಣ…
ನೀವು ಆಹಾರದಲ್ಲಿ ಪರ್ಯಾಯ ಹುಡುಕುತ್ತಿದ್ದೀರಾದರೆ, ಅದಕ್ಕೆ ಜೋಳದ ರೊಟ್ಟಿ ಉತ್ತರವಾಗಿರಬಹುದು. ಯಾಕೆಂದರೆ ಜೋಳದ ರೊಟ್ಟಿ ಸೇವನೆಯಿಂದ ಹೊಟ್ಟೆ ಉಬ್ಬುವುದು, ಆಯಾಸ, ತಲೆನೋವು, ಅತಿಸಾರ ಮತ್ತು ಮಲಬದ್ಧತೆ ಮೊದಲಾದ ಸಮಸ್ಯೆಗಳು ಕಡಿಮೆಯಾಗಿ ಆರಾಮದಾಯಕ ಜೀವನ ನಿಮ್ಮದಾಗಬಹುದು. ನಿಮ್ಮ ಜೀರ್ಣಕ್ರಿಯೆ ಕೂಡ ಉತ್ತಮವಾಗಿ ನಡೆಯುತ್ತದೆ.
ಜೋಳವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು, ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುವ ಉತ್ತಮ ಅಂಶದ ಫೈಬರ್ ನ್ನು ಹೊಂದಿದೆ. ಮಾತ್ರವಲ್ಲೇ ಜೋಳದ ರೊಟ್ಟಿ ಸೇವನೆಯಿಂದ ನಿಮ್ಮ ಹೊಟ್ಟೆ ತುಂಬಿದಂತಹ ಭಾವನೆ ಇರುವುದರಿಂದ ನೀವು ಅನಗತ್ಯವಾಗಿ ಸಿಕ್ಕಿ ಸಿಕ್ಕಿದ್ದನ್ನು ತಿನ್ನುವುದನ್ನು ತಪ್ಪಿಸಬಹುದಾಗಿದೆ.
ಊಟದ ನಂತರ ಹೊಟ್ಟೆ ಉಬ್ಬಿದಂತಾಗುವುದು, ಹೊಟ್ಟೆ ಭಾರ ಎನಿಸುವವರಿಗೆ ಜೋಳದ ರೊಟ್ಟಿ ಸೇವನೆ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಜೋಳದ ರೊಟ್ಟಿಗಳು ಬಹಳ ಹಗುರವಾಗಿರುವುದರಿಂದ ಕರುಳಿಗೆ ಉತ್ತಮವಾಗಿದೆ. ಇದರಲ್ಲಿರುವ ನಾರಿನಾಂಶಗಳು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಹೊಟ್ಟೆ ಶಾಂತವಾಗಿರುವಂತೆ ಮಾಡುತ್ತದೆ.
ಜೋಳದ ರೊಟ್ಟಿ ನಿಮ್ಮ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಅನ್ನು ನಿರ್ವಹಿಸುವ ಅಥವಾ ಮಧ್ಯಾಹ್ನದ ಸಮಯದಲ್ಲಿ ನಿಶಕ್ತಿ ಅನುಭವಿಸುವವರಿಗೆ ಜೋಳದ ರೊಟ್ಟಿಗಳು ಪ್ಲಸ್ ಆಗಿವೆ.
ಜೋಳ ರೊಟ್ಟಿಗಳು ನಿಮಗೆ ಹೆಚ್ಚಿನ ನೈಸರ್ಗಿಕ ಶಕ್ತಿಯನ್ನು ನೀಡುತ್ತವೆ. ಜೋಳವು ಫೈಬರ್ ಗಿಂತ ಹೆಚ್ಚಿನದನ್ನು ಹೊಂದಿದೆ. ಪೌಷ್ಟಿಕತಜ್ಞೆ ರೂಪಾಲಿ ದತ್ತ ಹೇಳುವಂತೆ ಇದು ಟ್ಯಾನಿನ್ ಗಳು, ಫೀನಾಲಿಕ್ ಆಮ್ಲಗಳು, ಆಂಥೋಸಯಾನಿನ್ ಗಳು, ಫೈಟೊಸ್ಟೆರಾಲ್‌ಗಳು ಮತ್ತು ಪಾಲಿಸೊಸನಾಲ್‌ಗಳಂತಹ ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿದೆ. ಇವು ದೇಹವನ್ನು ಉರಿಯೂತದಿಂದ ರಕ್ಷಿಸಲು ಮತ್ತು ಸ್ವತಂತ್ರ ರಾಡಿಕಲ್ ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಜೋಳ ನಿಧಾನವಾಗಿ ಜೀರ್ಣವಾಗುತ್ತದೆ, ಅಂದರೆ ಉತ್ತಮ ಪೋಷಕಾಂಶ ಹೀರಿಕೊಳ್ಳುವಿಕೆ ಮತ್ತು ದೀರ್ಘಕಾಲೀನ ಶಕ್ತಿ. ನೀವು ಆಗಾಗ್ಗೆ ಭಾರೀ ಊಟದ ನಂತರ ದಣಿದಿದ್ದರೆ, ಜೋಳದಂತಹ ಹಗುರವಾದ ಧಾನ್ಯವು ಒಂದು ಉತ್ತಮ ಪರಿಹಾರವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: