50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಥಳಿಸಿ ಕೊಂದ ತಂದೆ - Mahanayaka
7:54 AM Thursday 16 - October 2025

50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಥಳಿಸಿ ಕೊಂದ ತಂದೆ

thane
01/01/2022

ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದ ಎಂಬ ಕಾರಣಕ್ಕಾಗಿ ತಂದೆಯೋರ್ವ ತಿದ್ದಿ ಬುದ್ದಿ ಹೇಳುವುದು ಬಿಟ್ಟು, ಮಾರಣಾಂತಿಕವಾಗಿ ಥಳಿಸಿ ಮಗನನ್ನು ಹತ್ಯೆ ಮಾಡಿದ್ದಾನೆ.


Provided by

ಮಹಾರಾಷ್ಟ್ರದ ಥಾಣೆಯಲ್ಲಿ ಈ   ಘಟನೆ ನಡೆದಿದ್ದು,  ಮಗ ತನ್ನ ಜೇಬಿನಲ್ಲಿದ್ದ 50 ರೂಪಾಯಿ ಕದ್ದ ಎಂಬ ಸಿಟ್ಟಿನಿಂದ ತಂದೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಗನಿಗೆ  ಹಲ್ಲೆ ನಡೆಸುತ್ತಿರುವುದನ್ನು ಕಂಡ ಸ್ಥಳೀಯರು, ಹೊಡೆಯಬೇಡ ಎಂದು ಬುದ್ಧಿ ಹೇಳಿದರೂ ಆತ ಕೇಳದೇ ಕ್ರೂರಿಯಂತೆ ನಡೆದುಕೊಂಡಿದ್ದಾನೆ.

ಈ ವೇಳೆ ಬೇರೆ ದಾರಿ ಕಾಣದೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳು ಮಗನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಬರುವಷ್ಟರಲ್ಲಿ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಘಟನೆ ಸಂಬಂಧ ತಂದೆ, ಥಾಣೆಯ ವಗೋಭಾ ನಗರದ ನಿವಾಸಿ ಸಂದೀಪ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ

15-18ವರ್ಷದವರಿಗೆ ಕೊರೊನಾ ಲಸಿಕೆ  : ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ

ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿದ ಪ್ರಿನ್ಸಿಪಾಲ್

ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್

ಅಂಬೇಡ್ಕರ್, ಕುವೆಂಪು ವೃತ್ತ ವಿವಾದ: ಮೈಸೂರಿನ ಮಾತೃ ಮಂಡಳಿ ವೃತ್ತ ನೆಲಸಮ

ಇತ್ತೀಚಿನ ಸುದ್ದಿ