ಮ್ಯಾನೇಜರ್ ನ ಗಮನ ಬೇರೆಡೆ ಸೆಳೆದು 52 ಸಾವಿರ ನಗದು ಕದ್ದ ವಿದೇಶಿ ಪ್ರಜೆ - Mahanayaka
5:40 AM Wednesday 22 - October 2025

ಮ್ಯಾನೇಜರ್ ನ ಗಮನ ಬೇರೆಡೆ ಸೆಳೆದು 52 ಸಾವಿರ ನಗದು ಕದ್ದ ವಿದೇಶಿ ಪ್ರಜೆ

mony
12/08/2022

ಮ್ಯಾನೇಜರ್‌ ನ ಗಮನ ಬೇರೆಡೆಗೆ ಸೆಳೆದು ಕ್ಯಾಶ್ ಡ್ರಾವರ್ ನಲ್ಲಿದ್ದ 52 ಸಾವಿರ ನಗದು ಕಳ್ಳತನ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ಸೌಪರ್ಣಿಕ ಹೆಚ್.ಪಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.

ಪೆಟ್ರೋಲ್ ಬಂಕ್ ನ ಮ್ಯಾನೇಜರ್ ಮನೋಜ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತ ವಿದೇಶಿ ವ್ಯಕ್ತಿಯೋರ್ವ ಪೆಟ್ರೋಲ್ ಬಂಕ್ ಗೆ ಬಂದಿದ್ದು, ಬಂಕ್ ನಲ್ಲಿ ತನ್ನ ಕಾರಿಗೆ 500 ರೂಪಾಯಿ ಡೀಸೆಲ್ ಹಾಕಿಸಿಕೊಂಡಿದ್ದಾನೆ. ಸಿಬ್ಬಂದಿಗೆ ಹಣ ಕೊಟ್ಟ ಬಳಿಕ, ಕ್ಯಾಶ್ ಕೌಂಟರ್ ಬಳಿ ಬಂದು ಮನೋಜ್ ಅವರ ಬಳಿ ಇಂಗ್ಲಿಷ್ ನಲ್ಲಿ ಮಾತನಾಡಿ 2 ಸಾವಿರ ರೂ.‌ನೋಟು ಇದೆಯಾ ಎಂದು ಕೇಳಿದ್ದಾನೆ.

ಆಗ ಅವರು ಕ್ಯಾಶ್ ಡ್ರಾವರ್ ನಲ್ಲಿ ನೋಡಿ 1 ನೋಟು ಇದೆ ಎಂದು ಹೇಳಿದ್ದಾರೆ. ಆಗ ಅಪರಿಚಿತ ವ್ಯಕ್ತಿ ಡ್ರಾವರ್ ನಲ್ಲಿ ಬೇರೆ ನೋಟು ಇದೆಯೆಂದು ನೋಡಲು ಹೇಳಿ, ಮ್ಯಾನೇಜರ್ ನ ಗಮನ ಬೇರೆಡೆ ಸೆಳೆದು ಕ್ಯಾಶ್ ಡ್ರಾವರ್ ನಲ್ಲಿದ್ದ 52 ಸಾವಿರ ರೂ. ಹಣವನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾನೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ