ಹತ್ಯೆಗೆ ಯತ್ನ ಪ್ರಕರಣ: ಮಹಿಳೆ ಸಹಿತ 6 ಮಂದಿಯ ಬಂಧನ - Mahanayaka

ಹತ್ಯೆಗೆ ಯತ್ನ ಪ್ರಕರಣ: ಮಹಿಳೆ ಸಹಿತ 6 ಮಂದಿಯ ಬಂಧನ

konaje police
18/08/2023


Provided by

ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳೆಯ ಸಹಿತ 6 ಮಂದಿಯನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಸಪ್ನಾಝ್ (26), ಸಾಜು ಯಾನೆ ಸಾಜಿಲ್ (24), ಸಿರಾಜ್ ಅಬೂಬಕರ್ (41), ಮುಝಮ್ಮಿಲ್ ಯಾನೆ ಅಲ್ಮದ್ (23), ಮಸೂದ್ ಅಲಿ (30), ಅಸ್ಫರ್ (28) ಬಂಧಿತರು.

ಆಗಸ್ಟ್ 12 ರಂದು ಈ ಪ್ರಕರಣದ ಪಿರ್ಯಾದಿದಾರರಾದ ನೆತ್ತಿಲಪದವು ನಿವಾಸಿ ಮನ್ಸೂರ್ (40) ಎಂಬುವವರಿಗೆ ಹಾಗೂ ಈ ಪ್ರಕರಣದ ಆರೋಪಿಯಾದ ನಮೀ‌ ಹಂಜರವರಿಗೂ ಮನೆಯನ್ನು ಬಾಡಿಗೆ ಕೊಡುವ ವಿಚಾರದಲ್ಲಿ ತಕರಾರು ಆಗಿತ್ತು. ದಿನಾಂಕ: 12-08-2023 ರಂದು ಸಂಜೆ 5:30 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ನೆತ್ತಿಲಪದವು ಶಾಂತಿ ಪಾಲ್ ಶಾಲೆಯ ಹಿಂಬದಿ ಇರುವ ಸಮುಯ ಆರೋಪಿ ನಮೀರ್ ಹಂಝನು ಪಿರ್ಯಾದುದಾರರ ಬಳಿ ಬಂದು ನಿನಗೆ ಮನೆ ಬಾಡಿಗೆಗೆ ಕೊಡಲು ಆಗುವುದಿಲ್ಲವ..? ನೀನು ದೊಡ್ಡ ಜನವಾ, ನಿನ್ನನ್ನು ಮಯ್ಯತ್ ಆಕುವೆ ಎಂಬಿತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯ್ಯಲ್ಲಿದ್ದ ತಲವಾರಿನಿಂದ ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದ ಜೋರಾಗಿ ಬೀಸಿದ್ದು, ನಂತರ ತನ್ನ ಬಳಿಯಿದ್ದ ಕೋಳಿಯ ಕಾಲಿಗೆ ಕಟ್ಟುವ ಚೂರಿಯಿಂದ (ಬಾಲ್) ಪಿರ್ಯಾದುದಾರರ ಹೊಟ್ಟೆಗೆ ಬೀಸಿದ್ದು, ಅದನ್ನು ತಪ್ಪಿಸಿಕೊಳ್ಳಲು ಪಿರ್ಯಾದುದಾರರು ತನ್ನ ಎಡ ಕೈಯನ್ನು ಅಡ್ಡ ಹಿಡಿದ ಪರಿಣಾಮ ಪಿರ್ಯಾದುದಾರರ ಎಡ ಕೈಯ ಮೊಣಗಂಟಿನ ಕೆಳಭಾಗದಲ್ಲಿ ರಕ್ತಗಾಯವಾಗಿತ್ತು. ಈ‌ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 65/2023 ಕಲಂ: 323, 307, 504,506 ಕೇಸು ದಾಖಲಾಗಿ ತನಿಖೆ ನಡೆಸಲಾಗುತ್ತಿತ್ತು.

ಈ ಪ್ರಕರಣದಲ್ಲಿ ಕೃತ್ಯ ಎಸಗಿದ ನಂತರ ತಲೆಮರೆಸಿಕೊಂಡಿರುವ ಆರೋಪಿಯಾದ ನಮೀರ್ ಹಂಝನ ಪತ್ತೆಯ ಬಗ್ಗೆ ಪ್ರಯತ್ನದಲ್ಲಿರುವಾಗ ಆರೋಪಿ ತಲೆಮರಿಸಿಕೊಳ್ಳಲು ಸಹಕರಿಸಿ ಹಾಗೂ ವಿಚಾರಣೆಯ ಸಮಯ ಸುಳ್ಳು ಮಾಹಿತಿ ನೀಡಿ ತನಿಖೆಯ ದಾರಿ ತಪ್ಪಿಸಿದ ಆರೋಪಿ ಹಂಝನ ಹೆಂಡತಿ ಮತ್ತು ಆತನ ಸಹಚರರನ್ನು ದಸ್ತಗಿರಿ ಮಾಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ‌.

ಇತ್ತೀಚಿನ ಸುದ್ದಿ