6 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ | ವಿವಾದಿತ ಸಚಿವ ಉಮೇಶ್ ಕತ್ತಿಗೂ ಸ್ಥಾನ - Mahanayaka
11:56 AM Wednesday 10 - December 2025

6 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ | ವಿವಾದಿತ ಸಚಿವ ಉಮೇಶ್ ಕತ್ತಿಗೂ ಸ್ಥಾನ

usthuvari sachivaru
02/05/2021

ಬೆಂಗಳೂರು: ರಾಜ್ಯದ 6 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದ್ದು,  ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ ಕಲಬುರ್ಗಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.

ಜಿಲ್ಲೆಯ ಹೊರಗಿನ ಶಾಸಕರಿಗೆ ಮಣೆ ಹಾಕಲಾಗಿದ್ದು, ಯಾರಿಗೂ  ತಮ್ಮದೇ ಜಿಲ್ಲೆಯನ್ನು ನೀಡಲಾಗಿಲ್ಲ. ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿದ್ದ ಸುಳ್ಯ ಕ್ಷೇತ್ರದ ಅಂಗಾರ ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಳಗಾವಿ ಜಿಲ್ಲೆಗೆ ,  ಬಾಗಲಕೋಟೆ ಜಿಲ್ಲೆಗೆ ವಿವಾದಿತ ಸಚಿವ ಉಮೇಶ್ ಕತ್ತಿ ಅವರನ್ನು ಉಸ್ತುವಾರಿ ಸಚಿವರಾಗಿ ಆಯ್ಕೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಎಸ್.ಅಂಗಾರ, ಸಚಿವ ಅರವಿಂದ ಲಿಂಬಾವಳಿ ಬೀದರ್ ಜಿಲ್ಲೆ ನೇಮಕ ಮಾಡಲಾಗಿದೆ. ಎಂಟಿಬಿ ನಾಗರಾಜ್ ಕೋಲಾರ ಜಿಲ್ಲೆಗೆ, ಸಚಿವ ಮುರುಗೇಶ್ ನಿರಾಣಿ ಕಲಬುರ್ಗಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.

ಇತ್ತೀಚಿನ ಸುದ್ದಿ