60 ಅಂತಸ್ತಿನ ಕಟ್ಟಡದಿಂದ ಬಿದ್ದ ಮಿಸ್ ಯು ಎಸ್ ಎ - Mahanayaka

60 ಅಂತಸ್ತಿನ ಕಟ್ಟಡದಿಂದ ಬಿದ್ದ ಮಿಸ್ ಯು ಎಸ್ ಎ

miss usa
31/01/2022


Provided by

ನ್ಯೂಯಾರ್ಕ್: 2019ರಲ್ಲಿ ಮಿಸ್ ಯು ಎಸ್ ಎ  ಆಗಿ ಹೊರಹೊಮ್ಮಿದ್ದ ಚೆಸ್ಲಿ ಕ್ರಿಸ್ಟ್ (30) ಅವರು 60 ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟಿರುವುದು ವರದಿಯಾಗಿದೆ.

ಅವರ ನಿಧನಕ್ಕೆ 202ರ ಮಿಸ್​ ಯೂನಿವರ್ಸ್ ಆಗಿರುವ ಭಾರತದ ಹರ್ನಾಜ್ ಸಂಧು ಕಂಬನಿ ಮಿಡಿದಿದ್ದಾರೆ.1991ರಲ್ಲಿ ಜನಿಸಿದ್ದ ಚೆಸ್ಲಿ ಕ್ರಿಸ್ಟ್ ಫ್ಯಾಷನ್ ಲೋಕದಲ್ಲಿ ಮಾತ್ರವಲ್ಲದೇ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಲಾದಿಂದ ಕಾನೂನು ಪದವಿ ಪಡೆದು ವಕೀಲೆಯಾಗಿಗೂ, ಎಕ್ಸ್‌ಟ್ರಾ ಟಿವಿ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ‘ವೈಟ್ ಕಾಲರ್ ಗ್ಲಾಮ್’ ಎಂಬ ಫ್ಯಾಷನ್​ ಬ್ಲಾಗ್​ ಸ್ಥಾಪಿಸಿದ್ದರು. ಆದರೆ ನಿನ್ನೆ ನ್ಯೂಯಾರ್ಕ್ ನಗರದ 60 ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ.

ಕ್ರಿಸ್ಟ್ ಸಾವಿಗೆ ಸಂತಾಪ ಸೂಚಿಸಿರುವ ಹರ್ನಾಜ್ ಸಂಧು, ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಕ್ರಿಸ್ಟ್ ಜೊತೆಗೆ ತೆಗೆದುಕೊಂಡಿದ್ದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದು ಹೃದಯವಿದ್ರಾವಕ ಮತ್ತು ನಂಬಲಾಗದ ಸಂಗತಿಯಾಗಿದೆ, ನೀವು ಯಾವಾಗಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ರೆಸ್ಟ್​ ಇನ್​ ಪೀಸ್​ ಚೆಸ್ಲಿ ಎಂದು ಬರೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ

ದುರಹಂಕಾರಿ ಸಚಿವರನ್ನು ಕೈಬಿಡಿ: ಎಂ.ಪಿ.ರೇಣುಕಾಚಾರ್ಯ 

ಲವ್ ಲೆಟರ್ ಕೊಟ್ಟ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

ರಸ್ತೆಯ ಗುಂಡಿಗೆ ಮತ್ತೊಂದು ಬಲಿ: ನಿಲ್ಲದ ರಕ್ತದಾಹ

ನಡು ರಸ್ತೆಯಲ್ಲಿ ತನ್ನ ವಾಹನಕ್ಕೆ ತಾನೇ ಬೆಂಕಿ ಹಚ್ಚಿದ ಮಾಲಿಕ!

 

ಇತ್ತೀಚಿನ ಸುದ್ದಿ