ಹೈಫಾದ ಮೆಟುಲಾ ಮೇಲೆ ಹಿಜ್ಬುಲ್ಲಾ ದಾಳಿ: ಇಸ್ರೇಲ್ ನಲ್ಲಿ 7 ಮಂದಿ ಸಾವು - Mahanayaka
10:00 AM Thursday 21 - August 2025

ಹೈಫಾದ ಮೆಟುಲಾ ಮೇಲೆ ಹಿಜ್ಬುಲ್ಲಾ ದಾಳಿ: ಇಸ್ರೇಲ್ ನಲ್ಲಿ 7 ಮಂದಿ ಸಾವು

01/11/2024


Provided by

ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯು ಮೆಟುಲಾ ಮತ್ತು ಹೈಫಾ ಬಳಿಯ ಕೃಷಿ ಹೊಲಗಳಲ್ಲಿ ಏಳು ಜೀವಗಳನ್ನು ಬಲಿ‌ ಪಡೆದುಕೊಂಡಿದೆ. ಇದು ಇಸ್ರೇಲಿ ನಾಗರಿಕರಿಗೆ ಮಾರಣಾಂತಿಕ ದಿನಗಳಲ್ಲಿ ಒಂದಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಗುರುವಾರ ಬೆಳಿಗ್ಗೆ ಗಡಿ ಪಟ್ಟಣ ಮೆಟುಲಾ ಬಳಿ ದುರಂತ ಸಂಭವಿಸಿದ್ದು, ಲೆಬನಾನ್ ನಿಂದ ಹಾರಿಸಿದ ರಾಕೆಟ್ ಸೇಬಿನ ತೋಟಕ್ಕೆ ಅಪ್ಪಳಿಸಿ ಐದು ಜನರು ಸಾವನ್ನಪ್ಪಿದ್ದಾರೆ.

ಇದಾದ ಕೆಲವೇ ಗಂಟೆಗಳ ನಂತರ, ಹೈಫಾ ಉಪನಗರ ಕಿರ್ಯತ್ ಹೊರಗಿನ ಆಲಿವ್ ತೋಪಿನಲ್ಲಿ ಹಿಜ್ಬುಲ್ಲಾ ಡಜನ್‌ಗಟ್ಟಲೆ ರಾಕೆಟ್ ಗಳನ್ನು ಹಾರಿಸಿದ್ದರಿಂದ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕೂಡ ಹಿಜ್ಬುಲ್ಲಾ ದಾಳಿಯನ್ನು ದೃಢಪಡಿಸಿದೆ. ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಡಿಎಫ್, “ಹಿಜ್ಬುಲ್ಲಾ ರಾಕೆಟ್ ಗಳು ಇಂದು ಇಸ್ರೇಲ್ ಒಳಗೆ 7 ಮುಗ್ಧ ನಾಗರಿಕರನ್ನು ಕೊಂದಿವೆ. ಹಿಜ್ಬುಲ್ಲಾದ ಮಾರಣಾಂತಿಕ ದಾಳಿಗಳಿಗೆ ಉತ್ತರಿಸದೆ ಇರಲು ನಾವು ಬಿಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ