ಏಳು ವರ್ಷಗಳ ಹಿಂದಿನ ಪೋಕ್ಸೊ ಪ್ರಕರಣ: ನೇಪಾಳದ ಆರೋಪಿ ಸೆರೆ - Mahanayaka

ಏಳು ವರ್ಷಗಳ ಹಿಂದಿನ ಪೋಕ್ಸೊ ಪ್ರಕರಣ: ನೇಪಾಳದ ಆರೋಪಿ ಸೆರೆ

jithendri
23/01/2023


Provided by

ಮಣಿಪಾಲ: ಏಳು ವರ್ಷಗಳ ಹಿಂದೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಣಿಪಾಲ ಪೊಲೀಸರು ಉತ್ತರಾಖಂಡ ರಾಜ್ಯದ ಬನ್ ಬಸಾ ಪೊಲೀಸ್ ಠಾಣಾ ವ್ಯಾಪ್ತಿಯ ಗಡಿಕೋಟ್ ಎಂಬಲ್ಲಿ ಜ.20ರಂದು ಬಂಧಿಸಿದ್ದಾರೆ.

ಬಂಧಿತನನ್ನು ನೇಪಾಳ ದೇಶದ ಜಿತೇಂದ್ರ ಶಾರ್ಕಿ(26) ಎಂದು ಗುರುತಿಸಲಾಗಿದೆ. 2015ರಲ್ಲಿ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೋಕ್ಸೊ ಪ್ರಕರಣಕ್ಕೆ ಈತ ಆರೋಪಿಯಾಗಿದ್ದನು.

ಕಳೆದ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ದ ನ್ಯಾಯಾಲಯವು ಸುಮಾರು 16 ಬಾರಿ ವಾರಂಟ್ ಹಾಗೂ ಮೂರು ಬಾರಿ ಅಟ್ಯಾಚ್‌ ಮೆಂಟ್ ವಾರೆಂಟ್ ಹೊರಡಿಸಿತ್ತು.

ಈತನನ್ನು ಪತ್ತೆ ಹಚ್ಚಲು ರಚಿಸಲಾದ ವಿಶೇಷ ತಂಡವು ಸತತ ಒಂದು ವಾರಗಳ ಕಾಲ ಭಾರತ- ನೇಪಾಳ ಗಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಆರೋಪಿಯನ್ನು ಬಂಧಿಸಿದೆ. ಜ.22ರಂದು ವಾರೆಂಟ್ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ