ಬಾಂಗ್ಲಾದೇಶದಲ್ಲಿ ಪ್ರತಿಭಟನೆ: 72 ಮಂದಿ ಸಾವು; ಪ್ರತಿಭಟನಾಕಾರರನ್ನು 'ಭಯೋತ್ಪಾದಕರು' ಎಂದು ಕರೆದ ಪ್ರಧಾನಿ ಹಸೀನಾ - Mahanayaka

ಬಾಂಗ್ಲಾದೇಶದಲ್ಲಿ ಪ್ರತಿಭಟನೆ: 72 ಮಂದಿ ಸಾವು; ಪ್ರತಿಭಟನಾಕಾರರನ್ನು ‘ಭಯೋತ್ಪಾದಕರು’ ಎಂದು ಕರೆದ ಪ್ರಧಾನಿ ಹಸೀನಾ

04/08/2024


Provided by

ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಭಾನುವಾರ ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವೆ ಸರಣಿ ಹಿಂಸಾತ್ಮಕ ಘರ್ಷಣೆಗಳು ನಡೆದವು. ಸರ್ಕಾರಿ ಉದ್ಯೋಗ ಕೋಟಾ ವ್ಯವಸ್ಥೆಯ ವಿರುದ್ಧದ ಅಸಹಕಾರ ಚಳವಳಿಯ ಭಾಗವಾದ ಪ್ರತಿಭಟನೆಗಳು ಮಾರಣಾಂತಿಕವಾಗಿ ಮಾರ್ಪಟ್ಟಿದ್ದು, 14 ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 72 ಸಾವುನೋವುಗಳು ಸಂಭವಿಸಿವೆ. ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ಸ್ಟೂಡೆಂಟ್ಸ್ ಅಗೇನ್ಸ್ಟ್ ಡಿಸ್ಕ್ರಿಮಿನೇಷನ್ ಆಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಬೆಳಿಗ್ಗೆ ಹಿಂಸಾಚಾರ ಪ್ರಾರಂಭವಾಯಿತು.

ಅವರು ಅವಾಮಿ ಲೀಗ್, ಛತ್ರ ಲೀಗ್ ಮತ್ತು ಜುಬೊ ಲೀಗ್ ಬೆಂಬಲಿಗರಿಂದ ಪ್ರತಿರೋಧವನ್ನು ಎದುರಿಸಿದರು.
ಇನ್ನು‌ ಈ ಘರ್ಷಣೆಗಳು ದೇಶಾದ್ಯಂತ 72 ಸಾವುಗಳಿಗೆ ಕಾರಣವಾಗಿವೆ ಎಂದು ಪ್ರಮುಖ ಬಂಗಾಳಿ ದಿನಪತ್ರಿಕೆ ಪ್ರೊಥೋಮ್ ಅಲೋ ವರದಿ ಮಾಡಿದೆ. ಸಿರಾಜ್‌ಗಂಜ್‌ನ ಎನಾಯೆಟ್ಪುರ ಪೊಲೀಸ್ ಠಾಣೆಯಲ್ಲಿ 13 ಮತ್ತು ಕೊಮಿಲ್ಲಾದ ಎಲಿಯಟ್ ಗಂಜ್‌ನಲ್ಲಿ ಒಬ್ಬರು ಸೇರಿದಂತೆ 14 ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿ ದೃಢಪಡಿಸಿದೆ.

ಇನ್ನು ಹಿಂಸಾಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಭಾನುವಾರ ಸಂಜೆ 6 ಗಂಟೆಯಿಂದ ಅನಿರ್ದಿಷ್ಟ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಿಸಿದೆ. ಅಲ್ಲದೇ ಸರ್ಕಾರದ ನಿರ್ದೇಶನದಂತೆ ಫೇಸ್ಬುಕ್, ಮೆಸೆಂಜರ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಮೆಟಾ ಫ್ಲಾಟ್ ಫಾರ್ಮ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ 4 ಜಿ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ