75 ಯುವತಿಯರನ್ನು ಮದುವೆಯಾಗಿ, 200 ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪಾಪಿ ಅರೆಸ್ಟ್! - Mahanayaka

75 ಯುವತಿಯರನ್ನು ಮದುವೆಯಾಗಿ, 200 ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡಿದ ಪಾಪಿ ಅರೆಸ್ಟ್!

muneer
05/10/2021


Provided by

ನವದೆಹಲಿ:  ಬಾಂಗ್ಲಾದೇಶದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ಆರೋಪಿಯೋರ್ವನನ್ನು ಮಧ್ಯಪ್ರದೇಶದ ಇಂದೂರ್ ಪೊಲೀಸರು ಬಂಧಿಸಿದ್ದು, ಈ ಮೂಲಕ ಬೃಹತ್ ವಂಚನೆ ಹಾಗೂ ವೇಶ್ಯಾವಾಟಿಕೆಯೊಂದು ಬೆಳಕಿಗೆ ಬಂದಿದೆ.

ಮುನೀರ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಿದ ಪೊಲೀಸರು, ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಒಂದೊಂದೆ ಬೆಚ್ಚಿಬೀಳಿಸುವ ವಿಚಾರಗಳನ್ನು ಕಕ್ಕಿದ್ದಾನೆ.

ಈತ ಬಾಂಗ್ಲಾದೇಶದಿಂದ ಸುಮಾರು 75 ಹುಡುಗಿಯರನ್ನು ಮದುವೆಯಾಗಿದ್ದು, ಮದುವೆಯ ಬಳಿಕ ಮಧ್ಯಪ್ರದೇಶಕ್ಕೆ ಕರೆತಂದು ಅವರನ್ನು ವೇಶ್ಯಾವಾಟಿಕೆಗೆ ದೂಡಿದ್ದ ಎನ್ನಲಾಗಿದೆ. ಮದುವೆಯ ಹೆಸರಿನಲ್ಲಿ 75ಕ್ಕೂ ಅಧಿಕ ಯುವತಿಯರ ಜೀವನವನ್ನೇ ಈತ ಹಾಳು ಮಾಡಿದ್ದ.

ಪ್ರತೀ ತಿಂಗಳು 55 ಯುವತಿಯರನ್ನು ವೇಶ್ಯಾವಾಟಿಕೆಗೆ ಕರೆತರುವ ಟಾರ್ಗೆಟ್ ಈತ ಇಟ್ಟುಕೊಂಡಿದ್ದ ಎನ್ನಲಾಗಿದೆ. ಕಳೆದ 5 ವರ್ಷಗಳಿಂದ ಈ ದಂಧೆಯನ್ನು ನಡೆಸುತ್ತಿದ್ದ ಆರೋಪಿ  ಈವರೆಗೆ ಸುಮಾರು 200ಕ್ಕೂ ಅಧಿಕ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ನೂಕಿದ್ದ ಎಂದು ಒಪ್ಪಿಕೊಂಡಿದ್ದಾನೆ.

ಬಾಂಗ್ಲಾದೇಶದಿಂದ ಕರೆದುಕೊಂಡು ಬಂದ ಯುವತಿಯರನ್ನು  ಮುಂಬೈ, ಕೋಲ್ಕತ್ತ ಸೇರಿದಂತೆ ಇತರ ಪ್ರದೇಶಗಳಿಗೆ ಕಳುಹಿಸಿ ವೇಶ್ಯಾವಾಟಿಕೆಗೆ ಟ್ರೈನಿಂಗ್ ಕೊಡಿಸುತ್ತಿದ್ದ ಎಂದು ವಿಚಾರಣೆ ವೇಳೆ ಈತ ತಿಳಿಸಿದ್ದಾನೆ. ಇನ್ನೂ ಈತನ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಸುಮಾರು 22 ಯುವತಿಯರನ್ನು ರಕ್ಷಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಆನಂದ್ ಸಿಂಗ್, ಕಂಪ್ಲಿ ಗಣೇಶ್ ಎಣ್ಣೆ ಏಟು:  ಕೊನೆಗೂ ಪ್ರಕರಣ ರಾಜಿಯಲ್ಲಿ ಇತ್ಯರ್ಥ

ರೈಲಿನಲ್ಲಿ ಅಪ್ರಾಪ್ತೆಗೆ ಮೇಲೆ ಲೈಂಗಿಕ ಕಿರುಕುಳ ನಡೆಸಿದವನಿಗೆ 5 ವರ್ಷ ಜೈಲು ಶಿಕ್ಷೆ

ಆರ್ಯನ್ ಖಾನ್ ಜೊತೆಗೆ ರೇವ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಮಾಡೆಲ್ ಯಾರು ಗೊತ್ತಾ?

ವಿಶ್ವಾದ್ಯಂತ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ಸ್ಥಗಿತ!

ಕಾಂಗ್ರೆಸ್ ಗೆ ಭವಿಷ್ಯವಿಲ್ಲ, ರಾಷ್ಟ್ರಮಟ್ಟದಲ್ಲಿ ಒಡೆದು ಚೂರಾಗುತ್ತಿದೆ | ಸಚಿವ ಅಶ್ವಥ್ ನಾರಾಯಣ್

ಬಿಜೆಪಿ ತನ್ನ ತಾಲಿಬಾನಿ‌ ಮನಸ್ಥಿತಿಯನ್ನು  ಬೆತ್ತಲು‌ ಮಾಡಿಕೊಂಡಿದೆ | ಯೋಗಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಗುಡುಗು

ಇತ್ತೀಚಿನ ಸುದ್ದಿ