8 ವರ್ಷದ ಬಾಲಕಿಯ ತಲೆ ಕತ್ತರಿಸಿ ರುಂಡದೊಂದಿಗೆ ಗ್ರಾಮದಲ್ಲಿ ತಿರುಗಾಡಿದ ಆರೋಪಿಯ ಬಂಧನ - Mahanayaka
3:03 PM Tuesday 9 - September 2025

8 ವರ್ಷದ ಬಾಲಕಿಯ ತಲೆ ಕತ್ತರಿಸಿ ರುಂಡದೊಂದಿಗೆ ಗ್ರಾಮದಲ್ಲಿ ತಿರುಗಾಡಿದ ಆರೋಪಿಯ ಬಂಧನ

arrest
26/03/2022

ಭುವನೇಶ್ವರ: ಮಲವಿಸರ್ಜನೆಗೆ ತೆರಳಿದ್ದ 8 ವರ್ಷದ ಬಾಲಕಿಯ ತಲೆ ಕತ್ತರಿಸಿ, ರುಂಡದೊಂದಿಗೆ ಗ್ರಾಮದೆಲ್ಲೆಡೆ ತಿರುಗಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.


Provided by

ಜಮನಕಿರಾ ಬ್ಲಾಕ್‌ನ ಗ್ರಾಮದಲ್ಲಿ ಬಾಲಕಿ ಬೆಳಗ್ಗೆ ಮಲವಿಸರ್ಜನೆಗೆಂದು ಹೊಲಕ್ಕೆ ಹೋಗಿದ್ದಳು. ಈ ವೇಳೆ ಅಲ್ಲಿ ವ್ಯಕ್ತಿಯೊಬ್ಬ ಕೊಡಲಿಯಿಂದ ಆಕೆಯ ತಲೆ ಕತ್ತರಿಸಿಬಿಟ್ಟಿದ್ದಾನೆ. ನಂತರ ತುಂಡರಿಸಿದ ತಲೆಯನ್ನು ಹೊತ್ತು ಊರೆಲ್ಲ ಸುತ್ತಿದ್ದಾನೆ. ಆರೋಪಿ ಪತ್ನಿ ಕೈಯಲ್ಲಿ ತುಂಡರಿಸಿದ ತಲೆಯನ್ನು ಕಂಡಾಗ ಆತನೊಂದಿಗೆ ಜಗಳವಾಡಿದ್ದಾಳೆ. ಆದರೆ ಅವನು ಕೊಡಲಿಯಿಂದ ಹೆಂಡತಿಯನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ವಿಷಯ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮನಕಿರಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಪ್ರೇಮ್‍ಜಿತ್ ದಾಸ್ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅತಿಥಿ ಶಿಕ್ಷಕಿಯ ಮೃತದೇಹ ಮಠದ ಬಾವಿಯಲ್ಲಿ ಪತ್ತೆ

ಗಡಿ ವಿವಾದ: ಸಿಎಂ ಬೊಮ್ಮಾಯಿ ವಿರುದ್ಧ ಮಹಾರಾಷ್ಟ್ರದಲ್ಲಿ ಖಂಡನಾ ನಿರ್ಣಯ

ಪಾವಗಡ ಬಸ್ ಅಪಘಾತ ಪ್ರಕರಣ: 7ಕ್ಕೆ ಏರಿಕೆಯಾದ ಮೃತರ ಸಂಖ್ಯೆ

ಮಗುವಿನ ಗ್ರಹಗತಿ ಸರಿಯಿಲ್ಲ ಎಂದು ಜಲಾಶಯಕ್ಕೆ ಎಸೆದುಕೊಂದ ಪಾಪಿ ತಾಯಿ!

ಇತ್ತೀಚಿನ ಸುದ್ದಿ