ಶಕ್ತಿ ಯೋಜನೆ: ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಹಿಳೆಯರ ಓಡಾಟ! - Mahanayaka

ಶಕ್ತಿ ಯೋಜನೆ: ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಹಿಳೆಯರ ಓಡಾಟ!

chamarajanagara
12/06/2023

ಚಾಮರಾಜನಗರ: ಭಾನುವಾರದಿಂದ ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದ್ದು ಚಾಮರಾಜನಗರದಲ್ಲಿ ನಿತ್ಯ 80 ಸಾವಿರ ಮಂದಿ ಇದರ ಅನುಕೂಲ ಪಡೆಯುವ ನೀರಿಕ್ಷೆ ವ್ಯಕ್ತವಾಗಿದೆ. ಕೆಎಸ್ ಆರ್ ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಈ ಸಂಬಂಧ ಮಾತನಾಡಿದ್ದು ನಿತ್ಯ ಜಿಲ್ಲೆಯಲ್ಲಿ 480 ಬಸ್ ಗಳು ಸಂಚರಿಸಲಿದ್ದು ಸರಾಸರಿ 1.70 ಲಕ್ಷ ಪ್ರಯಾಣಿಕರು ಓಡಾಡ ನಡೆಸುತ್ತಾರೆ.

ಇದರಲ್ಲಿ 75-80 ಸಾವಿರ ಮಂದಿ ನಿತ್ಯ ಶಕ್ತಿ ಯೋಜನೆಯ ಅನುಕೂಲ ಪಡೆಯಲಿದ್ದು ಅಂತರಾಜ್ಯಕ್ಕೆ ಪ್ರಯಾಣ ಬೆಳೆಸುವವರು ಗಡಿ ತನಕ ಉಚಿತವಾಗಿ ಪ್ರಯಾಣಿಸಿ ಅದಾದ ಬಳಿಕ ಟಿಕೆಟ್ ಪಡೆಯಬೇಕು. ಜಾತ್ರಾ ವಿಶೇಷ ಬಸ್ ಗಳಲ್ಲೂ ಶಕ್ತಿ ಯೋಜನೆ ಅನ್ವಯವಾಗಲಿದ್ದು ಖಾಸಗಿ ಬಸ್ ನ್ಬು ಅವಲಂಬಿಸುವವರು ಈಗ ಸಾರಿಗೆ ಸಂಸ್ಥೆ ಬಸ್ ಗಳಿಗೆ ಶಿಫ್ಟ್ ಆಗಲಿದೆ ಎಂದು ಅವರು ಮಾಹಿತಿ ಕೊಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ