828 ವಿದ್ಯಾರ್ಥಿಗಳಲ್ಲಿ ಹೆಚ್ ಐವಿ ಪತ್ತೆ, 47 ವಿದ್ಯಾರ್ಥಿಗಳು ಸಾವು: ಕಾರಣ ಬಯಲು! - Mahanayaka
5:14 PM Thursday 16 - October 2025

828 ವಿದ್ಯಾರ್ಥಿಗಳಲ್ಲಿ ಹೆಚ್ ಐವಿ ಪತ್ತೆ, 47 ವಿದ್ಯಾರ್ಥಿಗಳು ಸಾವು: ಕಾರಣ ಬಯಲು!

hiv
09/07/2024

ಅಗರ್ತಲಾ: ಶಾಲಾ– ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್ ಐವಿ ಕಾಣಿಸಿಕೊಂಡಿರುವ ಆತಂಕಕಾರಿ ಘಟನೆ ಈಶಾನ್ಯ ರಾಜ್ಯವಾದ ತ್ರಿಪುರದಲ್ಲಿ ನಡೆದಿದ್ದು, ಸೋಂಕಿತರ ಪೈಕಿ 47 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ.


Provided by

ಒಟ್ಟು 828 ವಿದ್ಯಾರ್ಥಿಗಳಿಗೆ ಹೆಚ್ ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿನ 47 ವಿದ್ಯಾರ್ಥಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 572 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ತ್ರಿಪುರದ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ತಿಳಿಸಿದ್ದಾರೆ.

ಡ್ರಗ್ ಗೆ ಅಡಿಕ್ಟ್ ಆದ ವಿದ್ಯಾರ್ಥಿಗಳಲ್ಲಿ ಹೆಚ್ ಐವಿ ಕಾಣಿಸಿಕೊಂಡಿದ್ದು, ಇವರೆಲ್ಲರೂ ಶ್ರೀಮಂತರ ಮಕ್ಕಳೇ ಆಗಿದ್ದಾರೆ ಎಂದು ತಿಳಿದು ಬಂದಿದೆ. ಮಕ್ಕಳು ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ಪೋಷಕರು ತಿಳಿದುಕೊಳ್ಳುವ ಮೊದಲೇ ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎನ್ನುವುದು ಇನ್ನೊಂದು ದುರಂತವಾಗಿದೆ.

ತ್ರಿಪುರದಲ್ಲಿ 5,674 ಮಂದಿಗೆ ಹೆಚ್ ಐವಿ ಪಾಸಿಟಿವ್ ಇದ್ದು ಇದರಲ್ಲಿ 4,570 ಮಂದಿ ಪುರುಷರು, 1,103 ಮಂದಿ ಮಹಿಳೆಯರು ಸೇರಿದ್ದಾರೆ. ಅಲ್ಲದೇ ಪ್ರತಿ ನಿತ್ಯ 5 ರಿಂದ 7 ಹೊಸ ಹೆಚ್‌ಐವಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ