ಅವನು 12 ಅಡಿ ಆಳದ ಸಿಂಕ್ ಹೋಲ್ ಗೆ ಬಿದ್ದ | ಅಲ್ಲಿ ಇಲಿಗಳ ಸಾಮ್ರಾಜ್ಯದಲ್ಲಿ ಸಿಲುಕಿಕೊಂಡ | ಮುಂದೇನಾಯ್ತು? ಕುತೂಹಲಕಾರಿ ಸುದ್ದಿ ಓದಿ - Mahanayaka

ಅವನು 12 ಅಡಿ ಆಳದ ಸಿಂಕ್ ಹೋಲ್ ಗೆ ಬಿದ್ದ | ಅಲ್ಲಿ ಇಲಿಗಳ ಸಾಮ್ರಾಜ್ಯದಲ್ಲಿ ಸಿಲುಕಿಕೊಂಡ | ಮುಂದೇನಾಯ್ತು? ಕುತೂಹಲಕಾರಿ ಸುದ್ದಿ ಓದಿ

28/10/2020


Provided by

ಅವನು ಬಸ್ ಗಾಗಿ ಕಾಯುತ್ತಿದ್ದ. ಇದೇ ವೇಳೆ ಆಯತಪ್ಪಿ ಸುಮಾರು 12 ಅಡಿ ಆಳದ ಸಿಂಕ್ ನೊಳಗೆ ಬಿದ್ದು ಬಿಟ್ಟ. ಆ ಸಿಂಕ್‌ ಹೋಲ್ ನ ಒಳಗೆ  ರಾಶಿ ರಾಶಿ ಇಲಿಗಳು. ಇಂತಹ ಅನುಭವವನ್ನು ಕೇಳಿದರೇ ಒಂದು ಬಾರಿ ಮೈಮೇಲೆ ಕಟ್ಟಿರುವೆ ಹರಿದಂತಾಗುವುದಿಲ್ಲವೇ? ನಿಜ, ಆದರೆ ಇಂತಹದ್ದೊಂದು ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.


33 ವರ್ಷದ ಲಿಯೊನಾರ್ಡ್  ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ 12 ಅಡಿ ಆಳದ ಸಿಂಕ್‌  ಹೋಲ್ ನೊಳಗೆ ಬಿದ್ದಿದ್ದಾರೆ. ಈ ವೇಳೆ ಅವರಿಗೆ ತೀವ್ರವಾಗಿ ಗಾಯವೂ ಆಗಿದೆ. ಆದರೆ ಅದಕ್ಕಿಂತಲೂ ದೊಡ್ಡ ಕಷ್ಟ ಎದುರಾಗಿದ್ದೇನೆಂದರೆ, ಆ ಸಿಂಕ್‌  ಹೋಲ್ ನೊಳಗೆ ಇಲಿಗಳ ಸಾಮ್ರಾಜ್ಯವೇ ಇತ್ತು. ಬೊಬ್ಬಿಡದಿದ್ದರೆ, ಹೊರಗಿನವರಿಗೆ ತಾನು ಸಿಂಕ್‌ ಹೋಲ್ ಒಳಗೆ ಇರುವುದು ಗೊತ್ತಾಗುವುದಿಲ್ಲ. ಬೊಬ್ಬಿಟ್ಟರೆ, ಇಲಿಗಳು ಬಾಯಿಯೊಳಗೂ ಹೋಗುವ ಸಾಧ್ಯತೆಗಳಿವೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಿಯೊನಾರ್ಡ್   ಸಿಕ್ಕಿ ಹಾಕಿಕೊಂಡಿದ್ದರು.


ಸಿಂಕ್‌  ಹೋಲ್ ನೊಳಗಿದ್ದ ಇಲಿಗಳು ಮೈಯಿಡೀ ಹರಿದಾಡಿ, ಲಿಯೊನಾರ್ಡ್ ಗೆ ಇನ್ನಿಲ್ಲದ ಹಿಂಸೆಯನ್ನು ನೀಡಿದವು. ಇದೇ ಸಂದರ್ಭದಲ್ಲಿ ಯಾರೋ ಲಿಯೊನಾರ್ಡ್ ಸಿಂಕ್ ಹೋಲ್ ಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಅವರು ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾರೆ.


ತುರ್ತು ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಬಂದರು ಲಿಯೋನಾರ್ಡ್ ನನ್ನು ಇಲಿಗಳ ಸಾಮ್ರಾಜ್ಯದಿಂದ ಹೇಗೋ ಹೊರ ತೆಗೆಯಲಾಯಿತು. ಲಿಯೋನಾರ್ಡ್ ಸುಮಾರು 1 ಗಂಟೆಗೂ ಅಧಿಕ ಕಾಲ ಇಲಿಗಳ ಸಾಮ್ರಾಜ್ಯದೊಳಗೆ ಸಿಕ್ಕಿಹಾಕಿಕೊಂಡು ಯಾತನೆ ಅನುಭವಿಸಿದ್ದ. ಸಿಂಕ್ ಹೋಲ್ ಗೆ ಬಿದ್ದ ಸಂದರ್ಭದಲ್ಲಿ ಲಿಯೋನಾರ್ಡ್ ನ ಕೈ ಹಾಗೂ ಕಾಲು ಮುರಿತಕ್ಕೊಳಗಾಗಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ.


ಇತ್ತೀಚಿನ ಸುದ್ದಿ