ಸತೀಶ್ ಜಾರಕಿಹೊಳಿಗೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿಯೇ ಅತ್ಯಧಿಕ ಮತ! | ಮಂಗಳ ಮುನ್ನಡೆಗೆ ಬ್ರೇಕ್ - Mahanayaka

ಸತೀಶ್ ಜಾರಕಿಹೊಳಿಗೆ ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿಯೇ ಅತ್ಯಧಿಕ ಮತ! | ಮಂಗಳ ಮುನ್ನಡೆಗೆ ಬ್ರೇಕ್

mangala satish jarakiholi
02/05/2021


Provided by

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಫಲಿತಾಂಶವು ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. 24ನೇ ಸುತ್ತಿನಿಂದ ಸತತವಾಗಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿಕೊಂಡಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಮುನ್ನಡೆ ಅಂತರ ಆಗಾಗ ಏರಿಳಿತವಾಗುತ್ತಿದ್ದರೂ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿಯ ಮುನ್ನಡೆಗೆ ಬ್ರೇಕ್ ಹಾಕಿರುವ ಸತೀಶ್ ಜಾರಕಿಹೊಳಿ ನಿರಂತರ ಮುನ್ನಡೆ ಸಾಧಿಸಿಕೊಂಡಿದ್ದಾರೆ.

ಇನ್ನೂ 2 ಲಕ್ಷ ಮತಗಳ ಎಣಿಕೆ ಬಾಕಿ ಇದ್ದು, ಸದ್ಯ ಗೆಲುವಿನ ಸ್ಥಿತಿ 50-50 ಸಾಧ್ಯತೆಯಲ್ಲಿದೆ. 67ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 7,163 ಮತಗಳ ಮುನ್ನಡೆ ಸಾಧಿಸಿದ್ದಾರೆ. ಇನ್ನೂ ಬಿಜೆಪಿ ಶಾಸಕ ಆನಂದಮಾಮನಿ ಅವರ ಸವದತ್ತಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿಗೆ ಅತ್ಯಧಿಕ ಮತಗಳು ಲಭಿಸಿದ್ದು, ಬಿಜೆಪಿ ಅಭ್ಯರ್ಥಿಗಿಂತಲೂ  16 ಸಾವಿರಕ್ಕೂ ಅಧಿಕ ಮತಗಳನ್ನು ಸತೀಶ್ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ