ಲಕ್ಷಾಂತರ ಹಿಂದೂಗಳನ್ನು ಅಪಾಯಕ್ಕೆ ದೂಡಿದ ಕೇಂದ್ರ ಸರ್ಕಾರ!
ವಿದಿಶಾ: ಕೊವಿಡ್ ಸೋಂಕಿನಿಂದ ಇಡೀ ದೇಶವೇ ನಲುಗಿ ಹೋಗಿದೆ. ಈ ನಡುವೆ ಕುಂಭಮೇಳದಲ್ಲಿ ಭಾಗವಹಿಸಿದ ಮಧ್ಯಪ್ರದೇಶದ ಶೇ.99 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಕುಂಭಮೇಳವು ಕೊರೊನಾ ಹರಡಲು ಮುಖ್ಯ ಕಾರಣವಾಗುತ್ತಿದೆ.
ವಿದಿಶಾ ಜಿಲ್ಲೆ ಗಯಾರಸ್ಪರ ಪಟ್ಟಣದ ಕುಂಭಮೇಳಕ್ಕೆ ತೆರಳಿದ್ದ 83 ಯಾತ್ರಾರ್ಥಿಗಳ ಪೈಕಿ 60 ಮಂದಿಗೆ ಸೋಂಕು ತಗಲಿರುವುದು ತಿಳಿದು ಬಂದಿದೆ. ಇನ್ನು 22 ಜನರನ್ನು ಪತ್ತೆ ಹಚ್ಚಿ. ಪರೀಕ್ಷೆಗೊಳಪಡಿಸಲು ಜಿಲ್ಲಾಡಳಿತ ತಿಳಿದಿದೆ.
ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಕುಂಭಮೇಳ ನಡೆಸಲಾಗಿತ್ತು. ಈ ಕುಂಭ ಮೇಳದಿಂದಾಗಿ ಇದರಲ್ಲಿ ಭಾಗವಹಿಸಿದ ಭಾರೀ ಸಂಖ್ಯೆಯ ಹಿಂದೂಗಳು ಇದೀಗ ಸಂಕಷ್ಟದಲ್ಲಿದ್ದು, ಭಾಗಶಃ ಜನರಿಗೆ ಕೊರೊನಾ ತಗಲಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಮಧ್ಯಪ್ರದೇಶದ ಹಿಂದೂಗಳು ಅಪಾಯದಲ್ಲಿದ್ದಾರೆ.
ಕುಂಭಮೇಳಕ್ಕೆ ತೆರಳಿದ್ದ ಭಾಗಶಃ ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಕೇವಲ ಮಧ್ಯಪ್ರದೇಶ ಮಾತ್ರವಲ್ಲದೇ ದೇಶದ ನಾನಾ ಭಾಗದಿಂದ ಕುಂಭಮೇಳಕ್ಕೆ ತೆರಳಿದ್ದ ಹಿಂದೂಗಳು ಇದೀಗ ಕೊರೊನಾ ಭೀತಿಯಲ್ಲಿದ್ದಾರೆ.
ಉತ್ತರಾಖಂಡದ ಹರಿದ್ವಾರದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ನಡೆದ ಶಾಹಿ ಸ್ನಾನದಲ್ಲಿ ಲಕ್ಷಾಂತರ ಹಿಂದೂಗಳು ಭಾಗವಹಿಸಿದ್ದರು. ಇದೀಗ ಈ ಕುಂಭಮೇಳ ಇಡೀ ದೇಶಕ್ಕೆ ಕೊರೊನಾ ಹರಡಲು ಕಾರಣವಾಗುತ್ತಿದೆ ಎನ್ನುವ ಭೀತಿ ಉಂಟಾಗಿದೆ. ದೇಶದಲ್ಲಿ ಸರಿಯಾದ ವೈದ್ಯಕೀಯ ವ್ಯವಸ್ಥೆಗಳಿಲ್ಲ, ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಬೆಡ್ ಇದ್ದರೂ ಚಿಕಿತ್ಸೆ ನೀಡಲು ಸಾಕಷ್ಟು ವೈದ್ಯರಿಲ್ಲ, ಆಕ್ಸಿಜನ್ ಇಲ್ಲದೇ ಜನರು ಸಾಯುತ್ತಿದ್ದಾರೆ. ಈ ನಡುವೆ ಕುಂಭಮೇಳ ಕೂಡ ನಡೆಸಲಾಗಿದ್ದು,ಕುಂಭಮೇಳಕ್ಕೆ ಅವಕಾಶ ನೀಡಿ ಲಕ್ಷಾಂತರ ಹಿಂದೂಗಳನ್ನು ಸರ್ಕಾರವೇ ಸಂಕಷ್ಟಕ್ಕೆ ದೂಡಿದಂತಾಗಿದೆ.
ಕೊರೊನಾ ಹರಡುತ್ತಿದೆ ಎಂದು ಎಲ್ಲ ಧರ್ಮೀಯರ ಹಬ್ಬಗಳಿಗೆ ನಿರ್ಬಂಧ ಹೇರಿ, ಹಿಂದೂಗಳ ಹಬ್ಬಕ್ಕೆ ಮಾತ್ರವೇ ಸರ್ಕಾರ ಪರೋಕ್ಷ ಅವಕಾಶ ನೀಡಿದೆ. ಸರ್ಕಾರ ಬೇರೆಲ್ಲ ಧರ್ಮೀಯರಿಗೆ ಕೊರೊನಾ ಹರಡದಂತೆ ಕ್ರಮಕೈಗೊಂಡಿದ್ದರೆ, ಹಿಂದೂಗಳ ಬಗ್ಗೆ ಕಾಳಜಿವಹಿಸದೇ ಕೊರೊನಾ ಸೋಂಕು ಹರಡುವಂತಹ ಸ್ಥಿತಿಗೆ ತಂದಿದೆ ಎನ್ನು ಮಾತುಗಳು ದೇಶಾದ್ಯಂತ ಕೇಳಿ ಬಂದಿದೆ.




























