ಬೆಡ್ ದಂಧೆ: ದೊಡ್ಡ ತಿಮಿಂಗಿಲಗಳ ರಕ್ಷಿಸಲು ಸಣ್ಣ ಮಿಕಗಳನ್ನು ಹಿಡಿಯಲಾಗಿದೆ | ಸಿದ್ದರಾಮಯ್ಯ - Mahanayaka
9:34 AM Wednesday 10 - December 2025

ಬೆಡ್ ದಂಧೆ: ದೊಡ್ಡ ತಿಮಿಂಗಿಲಗಳ ರಕ್ಷಿಸಲು ಸಣ್ಣ ಮಿಕಗಳನ್ನು ಹಿಡಿಯಲಾಗಿದೆ | ಸಿದ್ದರಾಮಯ್ಯ

siddaramaiha
05/05/2021

ಬೆಂಗಳೂರು: ದೊಡ್ಡ ತಿಮಿಂಗಿಲಗಳನ್ನು ರಕ್ಷಿಸಲು ಸಣ್ಣ ಮಿಕಗಳನ್ನು  ಹಿಡಿಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬೆಡ್ ದಂಧೆ ಸಂಬಂಧ ಸರ್ಕಾರ ಇಬ್ಬರು ಆರೋಪಿಗಳ ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಕೊವಿಡ್ ಪ್ರಾರಂಭದಲ್ಲಿಯೇ ನಾನು ಕೊವಿಡ್ ನಿರ್ವಹಣೆಯ ಹಿಂದೆ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದೆ. ಇದರ ಜೊತೆಗೆ ನೀವು ಹೇಳುತ್ತಿರುವುದನ್ನೂ ಸೇರಿದಿ  ಹೈಕೋರ್ಟ್ ಹಾಲಿ ನ್ಯಾಯಾಧೀಶದಿಂದ ತನಿಖೆ ನಡೆಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ, ಬೆಡ್ ಬ್ಲಾಕಿಂಗ್ ನಿಮ್ಮ ಗಮನಕ್ಕೆ ತಂದು 10 ದಿನಗಳಾಯಿತು ಎಂದು ನೀವು ಹೇಳುತ್ತಿದ್ದೀರಿ. ಇಷ್ಟು ದಿನ ನೀವು ಏನು ಮಾಡುತ್ತಿದ್ದಿರಿ? ಅಧಿಕಾರಿಗಳ ಮನವೊಲಿಸುತ್ತಿದ್ದಿರಾ? ಅಥವಾ ಬೇರೇನಾದರೂ ವ್ಯವಹಾರದ ಮಾತುಕಥೆಗಳು ನಡೆದಿದ್ದವೇ?  ಎಂದು ಸಂಸದ ತೇಜಸ್ವಿ ಸೂರ್ಯಗೆ ಸಿಎಂ ಪ್ರಶ್ನಿಸಿದ್ದಾರೆ.

ತಿನ್ನುವ ಅನ್ನದಿಂದ ಹಿಡಿದು ಮನುಷ್ಯನ ಪ್ರಾಣದ ವರೆಗೆ ಎಲ್ಲದರಲ್ಲಿ ಜಾತಿ-ಧರ್ಮ ಎಳೆದುತರುತ್ತೀರಿ. ನಿಮ್ಮ ಕೊಳಕು ಬುದ್ಧಿಯನ್ನು ಯಾಕೆ ಕೊರೊನಾಕ್ಕೆ ಎಳೆದು ತರುತ್ತೀರಿ? ನಿಮ್ಮ ಮೆದುಳಲ್ಲಿರುವ ಕೋಮುವಾದದ ವೈರಸ್ ಕೊರೊನಾ ವೈರಸ್ ಗಿಂತಲೂ ಅಪಾಯಕಾರಿ. ಅದಕ್ಕೆ ಮೊದಲು ಚಿಕಿತ್ಸೆ  ಪಡೆದುಕೊಳ್ಳಿ ಎಂದು ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಬೆಡ್ ಬ್ಲಾಕಿಂಗ್ ನಲ್ಲಿ ಶಾಮೀಲಾಗಿರುವವರ ಒಂದೇ ಕೋಮಿನವರು ಎನ್ನುವ ಭಾವನೆಯನ್ನು ಮೂಡಿಸಲು ತೇಜಸ್ವಿ ಸೂರ್ಯ ಆರೋಪಿಗಳ ಪಟ್ಟಿ ಓದಿದರು. ಆದರೆ ಈ ಪ್ರಕರಣದ ಮುಖ್ಯ ಆರೋಪಿಗಳಾದ ಸಿಎಂ ಸೇರಿದಂತೆ  ಸಚಿವ, ಶಾಸಕರು, ಸಂಸದರೆಲ್ಲರೂ ಯಾವ ಧರ್ಮದವರು ಎಂದು ಹೇಳುತ್ತೀರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ