ರಾಜ್ಯ ಸುತ್ತಿದ್ದೇನೆ ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ | ಸಚಿವ ಶ್ರೀರಾಮುಲು - Mahanayaka

ರಾಜ್ಯ ಸುತ್ತಿದ್ದೇನೆ ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ | ಸಚಿವ ಶ್ರೀರಾಮುಲು

shree ramulu
05/05/2021


Provided by

ಚಿತ್ರದುರ್ಗ:  ನಾನು ರಾಜ್ಯ ಸುತ್ತಿದ್ದೇನೆ, ಜಿಲ್ಲೆಗಳಲ್ಲಿ ಬೆಡ್ ಬ್ಲಾಕಿಂಗ್ ಕಂಡು ಬಂದಿಲ್ಲ ಎಂದು  ಸಚಿವ ಶ್ರೀರಾಮುಲು ಹೇಳಿದ್ದು, ಬೆಂಗಳೂರಿನಲ್ಲಿ ಇದು ದೊಡ್ಡಮಟ್ಟದಲ್ಲಿ ನಡೆಯುತ್ತಿರಬಹುದು ಎಂದು ಹೇಳಿದ್ದಾರೆ.

 ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಆಸೆಗೆ ಬಿದ್ದು ಪ್ರತಿ ವಿಚಾರದಲ್ಲಿ ವ್ಯಾಪಾರ ಮಾಡುತ್ತಾರೆ. ಜನರ‌ ಸಾವಿನಲ್ಲೂ ಲಾಭ ಪಡೆದುಕೊಳ್ಳುವಂಥ ಮನುಷ್ಯರಿದ್ದಾರೆ. ಬೆಂಗಳೂರಿನಲ್ಲಿ ದೊಡ್ಡಮಟ್ಟದಲ್ಲಿ‌ ನಡೆಯುತ್ತಿರಬಹುದು ಎಂದು ಅವರು ಹೇಳಿದರು.

ಚಿತ್ರದುರ್ಗ ಜಿಲ್ಲೆಗೆ 7 ಸಾವಿರ ಕಿ.ಲೀ ಆಕ್ಸಿಜನ್ ಬೇಕೆಂದು ಮುಖ್ಯಮಂತ್ರಿಯರಲ್ಲಿ ಕೇಳಿದ್ದೇನೆ. ಇಲ್ಲಿ ಸದ್ಯ ಪ್ರತಿದಿನ 3 ಸಾವಿರ ಕಿ.ಲೀ. ಆಕ್ಸಿಜನ್ ಬೇಕಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಘಟಕ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ಬಗ್ಗೆ ಸಚಿವ‌ ಜಗದೀಶ ಶೆಟ್ಟರ್ ಜತೆಗೆ ಈ ಮಾತನಾಡಿ ಬೇಡಿಕೆ‌ ಸಲ್ಲಿಸಿದ್ದೇನೆ. ಇನ್ನೂ ರೆಮಿಡಿಸಿವಿರ್ ಸಹ ಕೊರತೆ ಇದೆ. ರೆಮಿಡಿಸಿವಿರ್ ಕಾಳ ಸಂತೆಯಲ್ಲಿ ಮಾರಾಟದ ಬಗ್ಗೆ ಆರೋಪವಿದೆ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ‌ ಜತೆ ಮಾತಾಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿ