ಬೆಡ್ ಸಿಗಲಿಲ್ಲ, ಆಟೋದಲ್ಲಿ ಸಿಎಂ ಮನೆಗೆ ಬಂದ ಕೊರೊನಾ ಸೋಂಕಿತ - Mahanayaka
7:48 PM Saturday 24 - January 2026

ಬೆಡ್ ಸಿಗಲಿಲ್ಲ, ಆಟೋದಲ್ಲಿ ಸಿಎಂ ಮನೆಗೆ ಬಂದ ಕೊರೊನಾ ಸೋಂಕಿತ

yediyurappa
09/05/2021

ಬೆಂಗಳೂರು: ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಅಸಹಾಯಕರಾದ ಕುಟುಂಬವೊಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿ ನಿವಾಸಕ್ಕೆ ಬಂದು ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆಯಷ್ಟೇ ಸಿಎಂ ನಿವಾಸದ ಮುಂದೆ ಸೋಂಕಿತ ವ್ಯಕ್ತಿಯ ಕುಟುಂಬ ಪ್ರತಿಭಟನೆ ನಡೆಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆದಿದೆ.

ಘಟನೆಯ ಬಳಿಕ ಪೊಲೀಸರು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  ಕೆ.ಜೆ.ಹಳ್ಳಿ ನಿವಾಸಿ ಪ್ರಭಾಕರ್ ಅವರಿಗೆ ನಗರದ ಹತ್ತಾರು ಆಸ್ಪತ್ರೆಗೆ ಸುತ್ತಾಡಿದರೂ ಹಾಸಿಗೆ ಲಭ್ಯವಾಗಿರಲಿಲ್ಲ. ಇದರಿಂದಾಗಿ ಕುಟುಂಬಸ್ಥರು ಸಿಎಂ ನಿವಾಸಕ್ಕೆ ಆಗಮಿಸಿದ್ದರು.

ಸಿಎಂ ಮನೆಯ  ಮುಂದೆ ಸೋಂಕಿತ ಆಟೋ ನಿಲ್ಲಿಸಿದ್ದು, ರಿಕ್ಷಾ ತೆರವು ಮಾಡಲು ಪೊಲೀಸರು ಎಷ್ಟು ಮನವಿ ಮಾಡಿದರೂ ಅವರು ಕೇಳದೇ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಿದರು. ಆ ಬಳಿಕ ಪೊಲೀಸರೇ ಬೆಡ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಪ್ರಭಾಕರ್ ಅವರಿಗೆ ಏಪ್ರಿಲ್ 24ಕ್ಕೆ ಪಾಸಿಟಿವ್ ರಿಪೋರ್ಟ್ ಬಂದಿದೆ.  ಆದರೆ ಇಲ್ಲಿಯವರೆಗೆ ಅವರಿಗೆ ಬೆಡ್ ಸಿಕ್ಕಿರಲಿಲ್ಲ. ಯಾವ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ ಎಂದು ಹೇಳುತ್ತಿದ್ದರು. ಹೀಗಾಗಿ ಮುಖ್ಯಮಂತ್ರಿಯ ಮನೆಗೆ ಬಂದಿರುವುದಾಗಿ ಸೋಂಕಿತನ ಪುತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ