ಬಂಡೆಗಳ ಮಧ್ಯೆ ಸಿಲುಕಿದ ಬೋಟ್ | ಸಹಾಯಕ್ಕೆ ಅಂಗಲಾಚುತ್ತಿರುವ 9 ಸಿಬ್ಬಂದಿ - Mahanayaka
10:50 AM Tuesday 21 - October 2025

ಬಂಡೆಗಳ ಮಧ್ಯೆ ಸಿಲುಕಿದ ಬೋಟ್ | ಸಹಾಯಕ್ಕೆ ಅಂಗಲಾಚುತ್ತಿರುವ 9 ಸಿಬ್ಬಂದಿ

Kapu
16/05/2021

ಕಾಪು: ಉಡುಪಿ ಜಿಲ್ಲೆಯ ಕಾಪು ಸಮುದ್ರದ ಬಂಡೆಗಳ ಮಧ್ಯೆ ಬೋಟ್ ವೊಂದು ಸಿಲುಕಿದ್ದು, 9 ಮಂದಿ ಸಿಬ್ಬಂದಿ ಪ್ರಾಣಾಪಾಯದಲ್ಲಿದ್ದಾರೆ. ನಮಗೆ ತಕ್ಷಣವೇ ನೆರವು ನೀಡುವಂತೆ ಬೋಟ್ ನಲ್ಲಿರುವ ಸಿಬ್ಬಂದಿ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಡಲು ತೀವ್ರವಾಗಿ ಪ್ರಕ್ಷುಬ್ದ ಸ್ಥಿತಿಯಲ್ಲಿದ್ದು, ಇವರನ್ನು ರಕ್ಷಿಸಲು ಬೋಟ್ ಮೂಲಕ ತೆರಳಲು ಅಸಾಧ್ಯ ಸ್ಥಿತಿ ಇದೆ.  ಈ ನಡುವೆ ಯಾವುದೇ ಕ್ಷಣಗಳಲ್ಲಿ ಬೋಟ್ ಬೃಹತ್ ಅಲೆಗೆ ಸಿಲುಕಿ ಮಗುಚಿ ಬೀಳುವ ಸ್ಥಿತಿಯಲ್ಲಿದೆ. ಬೋಟ್ ನಲ್ಲಿದ್ದವರೆಲ್ಲರೂ ಲೈಫ್ ಜಾಕೆಟ್ ಹಾಕಿಕೊಂಡಿದ್ದಾರಾದರೂ, ಪ್ರಾಣ ಭಯದಲ್ಲಿದ್ದಾರೆ.

ಅಪಾಯಕ್ಕೆ ಸಿಲುಕಿರುವವರನ್ನು ಏರ್ ಲಿಫ್ಟ್  ಮಾಡುವಂತೆ ಕೊಚ್ಚಿಯಲ್ಲಿರುವ ಕೋಸ್ಟ್ ಗಾರ್ಡ್ ಕಚೇರಿಗೆ ಮನವಿ ಮಾಡಲಾಗಿದೆ. ಆದರೆ ಈವರೆಗೂ ಹೆಲಿಕಾಫ್ಟರ್ ಬಂದಿಲ್ಲ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ