ಭಕ್ತರು ದೇವಸ್ಥಾನಕ್ಕೆ ಬರ್ತಿಲ್ಲ, ನಮಗೂ ಪ್ಯಾಕೇಜ್ ನೀಡಿ | ಅರ್ಚಕರಿಂದ ಮನವಿ - Mahanayaka

ಭಕ್ತರು ದೇವಸ್ಥಾನಕ್ಕೆ ಬರ್ತಿಲ್ಲ, ನಮಗೂ ಪ್ಯಾಕೇಜ್ ನೀಡಿ | ಅರ್ಚಕರಿಂದ ಮನವಿ

archaka
19/05/2021


Provided by

ಬೆಂಗಳೂರು: ಕೊರೊನಾ ಭೀತಿಯಿಂದ ಭಕ್ತರು ದೇವಸ್ಥಾನದ ಕಡೆಗೆ ಮುಖ ಮಾಡುತ್ತಿಲ್ಲ, ಹಾಗಾಗಿ ನಾವು ಸಂಕಷ್ಟದಲ್ಲಿದ್ದೇವೆ. ನಮಗೂ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಅರ್ಚಕರು ಸಿಎಂ ಯಡಿಯೂರಪ್ಪ ಅವರಿಗೆ ಅರ್ಚಕರು ಮನವಿ ಮಾಡಿದ್ದಾರೆ.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಹೆಸರಿನಲ್ಲಿ ಈ ಮನವಿಯನ್ನು ನೀಡಲಾಗಿದೆ. ಇನ್ನೂ ಈ ಬಗ್ಗೆ ಇಬ್ಬರು ಅರ್ಚಕರು ವಿಡಿಯೋ ಮೂಲಕ ಸರ್ಕಾರವನ್ನು ಮನವಿ ಮಾಡಿ,  ನಮ್ಮ ಬಳಿ ಆಸ್ಪತ್ರೆಗೆ ಹೋಗಲು ಕೂಡ ಹಣ ಇಲ್ಲ, ನಮಗೆ ಆಹಾರ ಕಿಟ್ ಕೂಡ ಸಿಗುತ್ತಿಲ್ಲ, ಹಲವು ಸಚಿವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅರ್ಚಕರು ಅಳಲು ತೋಡಿಕೊಂಡಿದ್ದಾರೆ.

ಬಡ ಅರ್ಚಕರಿಗೆ ಸರ್ಕಾರ ಸಹಕಾರ ಮಾಡಬೇಕು ಎಂದು  ಮನವಿ ಮಾಡಿದ್ದು, ಸರ್ಕಾರಕ್ಕೆ ಹೊರೆಯಾಗದಂತೆ ದೇವಸ್ಥಾನದ ಬ್ಯಾಂಕ್ ಖಾತೆಗಳಿಂದಲೇ ನಮಗೆ ಹಣ ನಿಗದಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ