ನದಿಯಲ್ಲಿ ಮುಳುಗಿದ 2 ದೋಣಿಗಳು ಮಗು ಸಾವು, 7 ಮಂದಿ ನಾಪತ್ತೆ - Mahanayaka

ನದಿಯಲ್ಲಿ ಮುಳುಗಿದ 2 ದೋಣಿಗಳು ಮಗು ಸಾವು, 7 ಮಂದಿ ನಾಪತ್ತೆ

vishakhapattanam
25/05/2021


Provided by

ವಿಶಾಖಪಟ್ಟಣಂ: ಆಂಧ್ರಪ್ರದೇಶ-ಒಡಿಶಾ ಗಡಿ ಸಿಲೇರು ನದಿಯಲ್ಲಿ 2 ದೋಣಿಗಳು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿ 7 ಮಂದಿ ನಾಪತ್ತೆಯಾಗಿದ್ದಾರೆ. ದೋಣಿಗಳಲ್ಲಿದ್ದ ಕೂಲಿ ಕಾರ್ಮಿಕರು ನೀರುಪಾಲಾಗಿದ್ದಾರೆ.

ಘಟನೆ ವೇಳೆ ಮೂವರು ಈಜಿ ದಡ ಸೇರಿ ಸುರಕ್ಷಿತವಾಗಿದ್ದಾರೆ. ವೈಜಾಗ್ ಏಜೆನ್ಸಿಯ ಎರಡು ದೋಣಿಗಳಲ್ಲಿ ಒಟ್ಟು 13 ಜನ ಪ್ರಯಾಣ ಮಾಡುತ್ತಿದ್ದರು. ಇವರೆಲ್ಲ ಹೈದರಾಬಾದ್‌ ನಲ್ಲಿ ಕೂಲಿ‌ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ ಡೌನ್ ಕಾರಣ ಸ್ವಗ್ರಾಮಕ್ಕೆ ಹಿಂತಿರುಗುವಾಗ ಈ ಘಟನೆ ನಡೆದಿದೆ.

ಪ್ರಯಾಣ ಶುರು ಮಾಡಿದ ಕೆಲವೇ ಗಂಟೆಗಳಲ್ಲಿ ಒಂದು ದೋಣಿ ಮುಳುಗಿದೆ. ಈ ವೇಳೆ ಮುಳುಗಿದ ದೋಣಿಯಲ್ಲಿದ್ದ ಜನ ತಮ್ಮ ಪ್ರಾಣ ಉಳಿಸಿಕೊಳ್ಳಲು ಎರಡನೇ ದೋಣಿಗೆ ಹತ್ತಲು ಪ್ರಯತ್ನಿಸಿದ್ದಾರೆ. ಆಗ ಎರಡನೇ ದೋಣಿಯೂ ಮುಳುಗಿದೆ. ಒಟ್ಟು 13 ಜನರ ಪೈಕಿ ನಾಲ್ವರು ಈಜಿ ದಡವನ್ನು ಸೇರಿ ಪ್ರಾಣ ಉಳಿಸಿಕೊಂಡಿದ್ದಾರೆ.

ಘಟನೆಯಲ್ಲಿ 10 ತಿಂಗಳ ಮಗು ಕೂಡ ಮೃತಪಟ್ಟಿದ್ದು ಮಗುವಿನ ಮೃತದೇಹ ಪತ್ತೆಯಾಗಿದೆ. ಉಳಿದ 8 ಜನರು ನಾಪತ್ತೆಯಾಗಿದ್ದು ನೀರುಪಾಲಾದ ಕೂಲಿ ಕಾರ್ಮಿಕರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

ಇತ್ತೀಚಿನ ಸುದ್ದಿ