ನನ್ನ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಮಾಜಿ ಸಚಿವ ಬೆದರಿಕೆ ಹಾಕುತ್ತಿದ್ದಾರೆ | ಖ್ಯಾತ ಚಿತ್ರ ನಟಿ ಆರೋಪ - Mahanayaka
8:55 AM Wednesday 15 - October 2025

ನನ್ನ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ಮಾಜಿ ಸಚಿವ ಬೆದರಿಕೆ ಹಾಕುತ್ತಿದ್ದಾರೆ | ಖ್ಯಾತ ಚಿತ್ರ ನಟಿ ಆರೋಪ

shantini deva
28/05/2021

ಚೆನ್ನೈ:  ನನ್ನ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವರೊಬ್ಬರು ನನಗೆ ಬೆದರಿಕೆ ಹಾಕುತ್ತಿದದಾರೆ ಎಂದು  ತಮಿಳಿನ ಖ್ಯಾತ ಚಿತ್ರನಟಿಯೊಬ್ಬರು  ಚೆನ್ನೈ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ.


Provided by

ತಮಿಳುನಾಡಿನ ಈ ಹಿಂದಿನ ಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಗಂಡನ್, ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 5 ವರ್ಷಗಳ ಕಾಲ ರಹಸ್ಯ ಜೀವನ ನಡೆಸಿದ್ದಾರೆ. ಅಲ್ಲದೆ, ಈ ವೇಳೆ ಅವರು ನನ್ನ ಹಲವು ಅಶ್ಲೀಲ ಪೋಟೋ-ವಿಡಿಯೋಗಳನ್ನು ತೆಗೆದಿದ್ದು, ಈಗ ಫೋಟೋಗಳನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ತಮಿಳು ಚಿತ್ರ ನಟಿ ಶಾಂತಿನಿ ದೇವಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಟಿ ಶಾಂತಿನಿ ದೇವಾ ತಾನು ಓರ್ವ ನಟಿಯಾಗಬೇಕು ಎಂಬ ಆಸೆಯಿಂದ ಚೆನ್ನೈಗೆ ಬಂದವರು. ಆದರೆ, ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ಸಚಿವ ಮಣಿಗಂಡನ್ ಪರಿಚಯವಾಗಿದೆ. ಆತ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇಬ್ಬರೂ 5 ವರ್ಷ ಒಟ್ಟಿಗೆ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್​ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ, ನಟಿ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಪೀಡಿಸಿದ್ದಾಳೆ. ಆದರೆ, ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ಅಶ್ಲೀಲ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ. ಇದಲ್ಲದೇ ಜನರನ್ನು ಬಿಟ್ಟು ಹತ್ಯೆ ಮಾಡುವುದಾಗಿಯೂ ಅವರು ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

shantini deva
ಮಣಿಗಂಡನ್ ಹಾಗೂ ಶಾಂತಿನಿ ದೇವಾ

ಇತ್ತೀಚಿನ ಸುದ್ದಿ