KSRTC ಹೆಸರನ್ನು ಇನ್ನು ಮುಂದೆ ಕರ್ನಾಟಕ ಬಳಸುವಂತಿಲ್ಲ! - Mahanayaka
1:22 PM Thursday 16 - October 2025

KSRTC ಹೆಸರನ್ನು ಇನ್ನು ಮುಂದೆ ಕರ್ನಾಟಕ ಬಳಸುವಂತಿಲ್ಲ!

ksrtc
03/06/2021

ನವದೆಹಲಿ: KSRTC ಬ್ರಾಂಡ್ ಗೆ ಸಂಬಂಧಿಸಿದಂತೆ ಕರ್ನಾಟಕ ಕೇರಳ ರಾಜ್ಯಗಳ ನಡುವೆ ಕಳೆದ ಹಲವು ವರ್ಷಗಳಿಂದ  ನಡೆಯುತ್ತಿದ್ದ ಕಾನೂನು ಹೋರಾಟ ಮುಕ್ತಾಯವಾಗಿದ್ದು, ಅಂತಿಮವಾಗಿ KSRTC ಬ್ರಾಂಡ್ ಕೇರಳದ ಪಾಲಾಗಿದೆ.


Provided by

ಬುಧವಾರ ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈ ಕುರಿತು ತೀರ್ಪು ನೀಡಿದೆ. ತೀರ್ಪಿನ Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ.

ಕೇರಳ ಮತ್ತು ಕರ್ನಾಟಕ 2013ರಲ್ಲಿ KSRTC ವಿಸ್ತ್ರತ ರೂಪಕ್ಕಾಗಿ ಕಾನೂನು ಹೋರಾಟವನ್ನು ತೀವ್ರಗೊಳಿಸಿದವು. ಕೇರಳ ರಾಜ್ಯವು Kerala State Road Transport Corporation (KSRTC) ಹೆಸರಿನಲ್ಲಿ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ಈಗ ತೀರ್ಪು ಪ್ರಕಟವಾಗಿದ್ದು ಕೆಎಸ್‌ ಆರ್‌ಟಿಸಿ ಕೇರಳದ ಪಾಲಾಗಿದೆ. ಕೆಎಸ್‌ಆರ್‌ ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ