ಇಂದು ಸಂಜೆ 5 ಗಂಟೆಗೆ ಪ್ರೆಸ್ ಮೀಟ್ ಕರೆದ ಸಿಎಂ ಯಡಿಯೂರಪ್ಪ - Mahanayaka

ಇಂದು ಸಂಜೆ 5 ಗಂಟೆಗೆ ಪ್ರೆಸ್ ಮೀಟ್ ಕರೆದ ಸಿಎಂ ಯಡಿಯೂರಪ್ಪ

yediyuarappa
03/06/2021


Provided by

ಬೆಂಗಳೂರು: ಸಿಎಂ ಯಡಿಯೂರಪ್ಪನವರು ಇಂದು ಸಂಜೆ 5 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು, ಲಾಕ್ ಡೌನ್ ವಿಸ್ತರಣೆ ಅಥವಾ ಕೊರೊನಾ 2ನೇ ಪ್ಯಾಕೇಜ್ ಸಂಬಂಧ ಅವರು ಮಾತನಾಡುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಈಗಾಗಲೇ ಸಿಎಂ ಕೊರೊನಾ ಪ್ಯಾಕೇಜ್ ಗೆ ಸಂಬಂಧಿಸಿದಂತೆ 1,250 ಕೋ.ರೂ. ಘೋಷಣೆ ಮಾಡಿದ್ದರು. 2ನೇ ಹಂತದ ಪ್ಯಾಕೇಜ್ ನಲ್ಲಿ ಇನ್ನಷ್ಟು ವರ್ಗಗಳನ್ನೊಳಗೊಂಡಂತೆ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2ನೇ ಹಂತದ ಪ್ಯಾಕೇಜ್‌ನಲ್ಲಿ ತಮ್ಮನ್ನು ಪರಿಗಣಿಸುವಂತೆ ಹಲವು ಕಾರ್ಮಿಕ ವರ್ಗಗಳು, ಶಿಕ್ಷಕರು, ರೈತರು, ನೇಕಾರರು ಈಗಾಗಲೇ ಮನವಿ ಮಾಡಿದ್ದಾರೆ.  ಇದೇ ಸಂದರ್ಭದಲ್ಲಿ ಲಾಕ್ ಡೌನ್ ವಿಸ್ತರಣೆಗೆ ಹೆಚ್ಚಿನ ಒಲವು ಕೇಳಿ ಬಂದಿದೆ. ಕಳೆದ ಬಾರಿ ಅನ್ ಲಾಕ್ ಮಾಡಿದ್ದರಿಂದಾಗಿ 2ನೇ ಅಲೆಯಲ್ಲಿ ಅತೀ ಹೆಚ್ಚು ಹಾನಿಯಾಗಿರುವುದನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ