ಮರಕ್ಕೆ ಡಿಕ್ಕಿ ಹೊಡೆದ ಕಾರು; ಸಿಆರ್ ಪಿಎಫ್ ಯೋಧ ನಿಧನ - Mahanayaka

ಮರಕ್ಕೆ ಡಿಕ್ಕಿ ಹೊಡೆದ ಕಾರು; ಸಿಆರ್ ಪಿಎಫ್ ಯೋಧ ನಿಧನ

annaiha shetty
05/06/2021


Provided by

ಮೈಸೂರು: ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಸಿಆರ್ ಪಿಎಫ್ ಯೋಧರೊಬ್ಬರು ನಿಧನರಾಗಿರುವ ಘಟನೆ ಮೈಸೂರಿನ ಹುಣಸೂರು-ಪಿರಿಯಪಟ್ಟಣ ಹೆದ್ದಾರಿಯ ಅರಸು ಕಲ್ಲಹಳ್ಳಿ ಬಳಿ ನಡೆದಿದೆ.

ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎಂದು ತಿಳಿದು ಬಂದಿದ್ದು,   ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಗೊರಳ್ಳಿಯ ನಾಗರಾಜಶೆಟ್ಟಿ ಅವರ ಪುತ್ರ 35 ವರ್ಷ ವಯಸ್ಸಿನ ಅಣ್ಣಯ್ಯ ಶೆಟ್ಟಿ ಮೃತಪಟ್ಟವರಾಗಿದ್ದಾರೆ.

ಅಣ್ಣಯ್ಯ ಶೆಟ್ಟಿ  ಮಹಾರಾಷ್ಟ್ರದ ನಕ್ಸಲ್ ಏರಿಯಾದ ಗಡ್ಸರ್‌ನಲ್ಲಿ 14 ವರ್ಷಗಳಿಂದ ಸಿಆರ್‌ ಪಿಎಫ್ ಯೋಧರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಜೆ ಮೇಲೆ ಬಂದಿದ್ದ ಇವರು ಮೈಸೂರಿನಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ತಾಲ್ಲೂಕಿನ ಕಲ್ಲಹಳ್ಳಿ ಗೇಟ್‌ನ ಹತ್ತಿರದಲ್ಲಿ ಬ್ರೇಕ್ ವಿಫಲಗೊಂಡು ನಿಯಂತ್ರಣ ತಪ್ಪಿ ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ