ಶ್ರೀಪವಾಡ ಬಸವೇಶ್ವರ ಮಹಾವಿದ್ಯಾಲಯದ ಸಿಬ್ಬಂದಿಗೆ ಆಹಾರ ಕಿಟ್ ವಿತರಣೆ - Mahanayaka
6:02 AM Wednesday 20 - August 2025

ಶ್ರೀಪವಾಡ ಬಸವೇಶ್ವರ ಮಹಾವಿದ್ಯಾಲಯದ ಸಿಬ್ಬಂದಿಗೆ ಆಹಾರ ಕಿಟ್ ವಿತರಣೆ

food kit
06/06/2021


Provided by

ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಶ್ರೀಪವಾಡ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಬಸರಕೋಡ ಸಂಸ್ಥೆಯ  ಸಂಕಷ್ಟಕ್ಕೀಡಾಗಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಲಾಯಿತು.

ಗ್ರಾಮೀಣ ವಿದ್ಯವರ್ಧಕ ಸಂಘ ಚರ್ಚಿನಕಲ್ಲ ಇದರಡಿಯಲ್ಲಿ ನಡೆಯುತ್ತಿರುವ ಶ್ರೀಪವಾಡ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಬಸರಕೋಡ ಸಂಸ್ಥೆಯ ಅಧ್ಯಕ್ಷರಾದ ಡಾ.ಜಿ.ಎನ್.ನಿಂಬಾಳ ಹಾಗೂ ಅವರ ಧರ್ಮಪತ್ನಿ ಜಿ.ಜಿ.ನಿಂಬಾಳ ಅವರು ಸಂಸ್ಥೆಯ ಸಿಬ್ಬಂದಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಕಿಟ್ ವಿತರಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ಪ.ಬ.ಕಲಾ ಮತ್ತು ವಾಣಿಜ್ಯ ಪದವ ಮಹಾ ವಿದ್ಯಾಲಯದ ಸಲಹಾ ಸಮಿತಿಯ ಅಧ್ಯಕ್ಷ ಕೆ.ವೈ.ಬಿರಾದಾರ, ಕಾರ್ಯದರ್ಶಿ ಶ್ರೀಶೈಲ ಮೇಟಿ,  ಉಪಾಧ್ಯಕ್ಷ  ಎಚ್.ಪಿ. ಕರಡಿ, ಬಿ.ಬಿ.ಸುತಾರ, ಸಂಗಣ್ಣ ಬಾಗೇವಾಡಿ, ಕರಡಿ ಹಾಗೂ ಪ್ರಾಚಾರ್ಯ ಪವನ ಚಲವಾದಿ ಉಪಸ್ಥಿತರಿದ್ದರು.

food kit

food kit

ಇತ್ತೀಚಿನ ಸುದ್ದಿ