ಜನರ ಸಂಕಷ್ಟಕ್ಕೆ ನೆರವಾಗುತ್ತಿರುವ ಮಾದರಿ ಯುವಕ ಸುಮಂತ್ ಗೌಡ - Mahanayaka
11:06 PM Thursday 16 - October 2025

ಜನರ ಸಂಕಷ್ಟಕ್ಕೆ ನೆರವಾಗುತ್ತಿರುವ ಮಾದರಿ ಯುವಕ ಸುಮಂತ್ ಗೌಡ

sumanth gowda
06/06/2021

ಬೆಂಗಳೂರು: ಕೊರೊನಾ ಸಂದರ್ಭದಲ್ಲಿ ಕರ್ನಾಟಕರಕ್ಷಣಾವೇದಿಕೆ ಬೆಂಗಳೂರು ನಗರ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಕುಂಚಿಟಿಗರ ಸಂಘದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಧ್ರುವ ಸರ್ಜಾ ಯುವ ಘರ್ಜನೆ(ರಿ) ಅಧ್ಯಕ್ಷ ವೈ.ಎಸ್.ಸುಮಂತ್ ಗೌಡ ಅವರು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ.


Provided by

ಇಂಜಿನಿಯರಿಂಗ್ ಓದಿರುವ ಸುಮಂತ್ ಗೌಡ ಅವರು ತಮ್ಮ ದುಡಿಮೆಯ ಸ್ವಂತ ಹಣದಿಂದ ಅನಾಥಾಶ್ರಮ, ವೃದ್ಧಾಶ್ರಮ, ಗುಡಿಸಲಿನಲ್ಲಿ ವಾಸವಿರುವ ನಿರಾಶ್ರಿತರು ಹಾಗೂ ಮಂಗಳ ಮುಖಿಯರಿಗೆ ನೆರವು ನೀಡುತ್ತಾ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತೀವ್ರವಾಗಿ ಸಂಕಷ್ಟದಲ್ಲಿರುವ ಮಂಗಳಮುಖಿಯರಿಗೆ ಆಹಾರ ಒದಗಿಸುವುದು, ಆಹಾರ ವಿಲ್ಲದೇ ಸಂಕಷ್ಟದಲ್ಲಿರುವ ಜನರನ್ನು ಹುಡುಕಿ ಆಹಾರ ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡೋಣ, ಹಾಗೆಯೇ ಎಲ್ಲರೂ ಸಂಕಷ್ಟದಲ್ಲಿರುವವರ ನೆರವಿಗೆ ನಿಲ್ಲೋಣ, ನಮ್ಮದೊಂದು ಅಳಿಲು ಸೇವೆಯನ್ನು ಮಾಡೋಣ ಎಂದು  ಸುಮಂತ್ ಗೌಡ ಕರೆ ನೀಡಿದ್ದಾರೆ.

sumanth gowda

sumanth gowda

sumanth gowda

ಇತ್ತೀಚಿನ ಸುದ್ದಿ