ಎಕ್ಸ್ ಪ್ರೆಸ್ ರೈಲುಗಳ ಮುಖಾಮುಖಿ ಡಿಕ್ಕಿ: 30 ಮಂದಿ ಸಾವು - Mahanayaka
11:28 PM Saturday 13 - December 2025

ಎಕ್ಸ್ ಪ್ರೆಸ್ ರೈಲುಗಳ ಮುಖಾಮುಖಿ ಡಿಕ್ಕಿ: 30 ಮಂದಿ ಸಾವು

pakisthan train
07/06/2021

ಇಸ್ಲಾಮಾಬಾದ್:  ಎರಡು ಎಕ್ಸ್ ಪ್ರೆಸ್ ಟ್ರೈನ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ 30ಕ್ಕೂ ಅಧಿಕ ಜನರು ಮೃತಪಟ್ಟು ಹಲವಾರು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ ನಡೆದಿದೆ.

ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ದಹಾರ್ಕಿ ರೈಲಿ ನಿಲ್ದಾಣ ಹಾಗೂ ರೇತಿಯಲ್ಲಿರುವ ನಿಲ್ದಾಣದ ನಡುವೆ ಈ ಡಿಕ್ಕಿ ನಡೆದಿದೆ. ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಹಾಗೂ ಮಿಲಾತ ಎಕ್ಸ್ ಪ್ರೆಸ್ ರೈಲು ನಡುವೆ ಅಪಘಾತವಾಗಿದೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು,  ಸಿಗ್ನಲ್ ದೋಷದಿಂದ ಈ ಘಟನೆ ನಡೆದಿರಬಹುದು ಎಂದು ಘೋಟ್ಕಿ ಜಿಲ್ಲಾ ಪೊಲೀಸ್ ಉಸ್ಮಾನ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ