ಹುಡುಗಿಯರಿಗೆ ಮೊಬೈಲ್ ನೀಡಿದರೆ ಅತ್ಯಾಚಾರವಾಗುತ್ತದೆ | ಮಹಿಳಾ ಆಯೋಗದ ಸದಸ್ಯೆ ಹೇಳಿಕೆ - Mahanayaka
9:40 AM Wednesday 20 - August 2025

ಹುಡುಗಿಯರಿಗೆ ಮೊಬೈಲ್ ನೀಡಿದರೆ ಅತ್ಯಾಚಾರವಾಗುತ್ತದೆ | ಮಹಿಳಾ ಆಯೋಗದ ಸದಸ್ಯೆ ಹೇಳಿಕೆ

uttar pradesh
10/06/2021


Provided by

ಆಗ್ರಾ: ಹುಡುಗಿಯರಿಗೆ ಮೊಬೈಲ್ ಕೊಡಬಾರದು, ಮೊಬೈಲ್ ಕೊಟ್ಟರೆ ಅದು ಅವರ ಅತ್ಯಾಚಾರಕ್ಕೆ ಕಾರಣವಾಗುತ್ತದೆ ಎಂದು ಉತ್ತರ ಪ್ರದೇಶದ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ವಿವಾದಾತ್ಮಕ  ಹೇಳಿಕೆ ನೀಡಿದ್ದಾರೆ.

ಅಲಿಘರ್ ಜಿಲ್ಲೆಯಲ್ಲಿ ಬುಧವಾರ ಮಹಿಳೆಯರಿಗೆ ಸಂಬಂಧಿಸಿದ ದೂರುದಾರರ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು,  ಹುಡುಗಿಯರಿಗೆ ಫೋನ್ ನೀಡಿದರೆ ಅವರು ಹುಡುಗರೊಂದಿಗೆ ಮಾತನಾಡುತ್ತಾರೆ.  ಆ ನಂತರ ಅವರೊಂದಿಗೆ ಓಡಿ ಹೋಗುತ್ತಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದ್ದಾರೆ.  ಆದರೆ ಮೀನಾ ಕುಮಾರಿಯ ಈ ಅವಿವೇಕತನದ ಹೇಳಿಕೆಯಿಂದ ಉತ್ತರ ಪ್ರದೇಶ ಮಹಿಳಾ ಆಯೋಗ ದೂರ ಉಳಿದಿದೆ.

ಇತ್ತೀಚಿನ ಸುದ್ದಿ