ಪ್ರಸಾದಕ್ಕೆ ಉಗುಳಿ ಭಕ್ತರಿಗೆ ವಿತರಣೆ | ವಾಕರಿಕೆ ಹುಟ್ಟಿಸುತ್ತೆ ಈ ಘಟನೆ - Mahanayaka

ಪ್ರಸಾದಕ್ಕೆ ಉಗುಳಿ ಭಕ್ತರಿಗೆ ವಿತರಣೆ | ವಾಕರಿಕೆ ಹುಟ್ಟಿಸುತ್ತೆ ಈ ಘಟನೆ

prasada
13/06/2021

ಮಥುರಾ: ದೇವರ ಪ್ರಸಾದ ಅಂದ್ರೆ ಸಾಕು, ಜನರು ಯಾವುದೇ ಭಯ, ಅನುಮಾನಗಳಿಲ್ಲದೇ ತಿನ್ನುತ್ತಾರೆ. ಅದನ್ನು ಹೇಗೆ ತಯಾರಿಸುತ್ತಾರೆ, ಹೇಗೆ ಹಂಚುತ್ತಾರೆ ಎನ್ನುವ ಪ್ರಶ್ನೆಗಳನ್ನೂ ಕೇಳದೇ ನಂಬಿಕೆಯಿಂದ ತಿನ್ನುತ್ತಾರೆ. ಉತ್ತರಪ್ರದೇಶದ ಗೋವರ್ಧನ ಜಿಲ್ಲೆಯ ದೇವಸ್ಥಾನವೊಂದರಲ್ಲಿ  ನಡೆದ ಘಟನೆ ಅಸಹ್ಯ ಹುಟ್ಟಿಸುವಂತಿದೆ.


Provided by

ದೇವಾಲಯಕ್ಕೆ ಬರುವ ಭಕ್ತರಿಗೆ ಕಿಚಡಿ ಪ್ರಸಾದ ವಿತರಣೆ ಮಾಡುತ್ತಿದ್ದು, ಈ ವೇಳೆ ಪ್ರಸಾದಕ್ಕೆ ಉಗುಳಿ ಭಕ್ತರಿಗೆ ಹಂಚುತ್ತಿದ್ದು, ಈ ವಿಡಿಯೋ ನೋಡಿದರೆ, ವಾಕರಿಕೆ ಬರುವುದಂತೂ ಖಂಡಿತ.

ಇಲ್ಲಿನ ಶ್ರೀಧಾಮ ರಾಧಾಕುಂಡದ ಸೇರಿದ ಪ್ರಾಣ್ ಕೃಷ್ಣದಾಸ್ ಮಹಾರಾಜ್ ಎಂಬ ಬಾಬಾ ಈ ರೀತಿಯಾಗಿ ಪ್ರಸಾದ ಹಂಚುತ್ತಿದ್ದಾನೆ. ದೇವರ ಹೆಸರಿನಲ್ಲಿ ಏನು ಕೊಟ್ಟರೂ ಪ್ರಸಾದ ಎಂದು ಸ್ವೀಕರಿಸುವ ಜನರು ಆತ ಉಗುಳಿ ನೀಡಿದ ಕಿಚಡಿಯನ್ನು ಸೇವಿಸುತ್ತಿರುವ ವಿಡಿಯೋವನ್ನು ಅಂತರ್ಜಾಲ ಮಾಧ್ಯಮವೊಂದು ಪೋಸ್ಟ್ ಮಾಡಿದೆ.

ಈ ಬಗ್ಗೆ ಕೇಳಿದರೆ, ಅದು ಇಲ್ಲಿನ ಸಂಪ್ರದಾಯ ಎಂದು ಹೇಳುತ್ತಿದ್ದಾರಂತೆ, ನಂಬಿಕೆಯ ಹೆಸರಿನಲ್ಲಿ ತನ್ನ ಎಂಜಲನ್ನು ಜನರಿಗೆ ತಿನ್ನಿಸುವುದು ಎಷ್ಟೊಂದು ಅಸಹ್ಯಕಾರಿ ಅಲ್ಲವೇ?  ಅಂದ ಹಾಗೆ ಈ ವರದಿ ಕೆಲವೇ ಕೆಲವು ಅಂತರ್ಜಾಲ ಮಾಧ್ಯಮಗಳಲ್ಲಿ ಮಾತ್ರವೇ ಪ್ರಕಟವಾಗಿದೆ.

ಇತ್ತೀಚಿನ ಸುದ್ದಿ