ವಿವಾಹದ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ | ಹೈಕೋರ್ಟ್ ತೀರ್ಪು! - Mahanayaka
12:22 AM Thursday 16 - October 2025

ವಿವಾಹದ ಉದ್ದೇಶಕ್ಕಾಗಿ ಮತಾಂತರ ಸ್ವೀಕಾರಾರ್ಹವಲ್ಲ | ಹೈಕೋರ್ಟ್ ತೀರ್ಪು!

31/10/2020

ಅಲಹಾಬಾದ್: ಕೇವಲ ಮದುವೆಯ ಉದ್ದೇಶಕ್ಕಾಗಿ ಧರ್ಮವನ್ನು ಬದಲಿಸುವುದು ಸ್ವೀಕಾರಾರ್ಹವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿ, ಅಂತರ್ ಧರ್ಮೀಯ ವಿವಾಹ ಮಾಡಿಕೊಂಡ ದಂಪತಿಗಳು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.



Provided by

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮುಸ್ಲಿಮ್ ಮಹಿಳೆ ಮದುವೆಗೆ ಒಂದು ತಿಂಗಳ ಮುಂಚೆ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಇದರಿಂದಾಗಿ ವಿವಾಹಕ್ಕಾಗಿಯೇ ಮತಾಂತರ ಆಗಲಾಗಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದುನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಹೇಳಿದರು.


 2014 ರಲ್ಲಿ  ಮತಾಂತರಗೊಂಡು ಮುಸ್ಲಿಂ ಯುವಕನನ್ನು ಮದುವೆಯಾದ ಪ್ರಕರಣವೊಂದನ್ನು ಉಲ್ಲೇಖಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಭಾರತದಲ್ಲಿ ಪ್ರತಿಯೊಬ್ಬರು ಅವರು ಇಷ್ಟಪಡುವ ಧರ್ಮವನ್ನು ಆಯ್ಕೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಮತ್ತು ಇದು ಧಾರ್ಮಿಕ ಸ್ವಾತಂತ್ರವಾಗಿದೆ. ಕೋರ್ಟ್ ನ ತೀರ್ಪಿಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳೂ ಇವೆ.


ಸದ್ಯ ದೇಶಾದ್ಯಂತ ಅಂತರ್ ಧರ್ಮೀಯ, ಅಂತರ್ಜಾತಿಯ ವಿವಾಹಗಳು ಸಾಕಷ್ಟು ನಡೆಯುತ್ತಿವೆ. ಅಂತರ್ ಧರ್ಮೀಯ, ಜಾತಿಯ ಮದುವೆಗಳಿಗೆ ವಿವಿಧ ರಾಜ್ಯಗಳಲ್ಲಿ ಸರ್ಕಾರ ಪ್ರೋತ್ಸಾಹ ಧನಗಳನನ್ನೂ ನೀಡುತ್ತಿದೆ. ಆದರೆ ಕೋರ್ಟ್ ತೀರ್ಪು ಸದ್ಯ ಜನತೆಯಲ್ಲಿ ಗೊಂದಲ ಮೂಡಿಸಿದೆ.


ಇತ್ತೀಚಿನ ಸುದ್ದಿ