ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ದೇವಮಾನವ ಮಹಿಳಾ ಭಕ್ತೆಯ ಮನೆಯಲ್ಲಿ ಪತ್ತೆ! - Mahanayaka
11:53 AM Tuesday 2 - December 2025

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ದೇವಮಾನವ ಮಹಿಳಾ ಭಕ್ತೆಯ ಮನೆಯಲ್ಲಿ ಪತ್ತೆ!

shiv shankar baba
16/06/2021

ಚೆನ್ನೈ: ದೇವಮಾನವ ಶಿವಶಂಕರ ಬಾಬಾನ ಕಾಮಕಾಂಡ ಬಯಲಾಗುತ್ತಿದ್ದಂತೆಯೇ ಆತ ತಲೆ ಮರೆಸಿಕೊಂಡಿದ್ದ. ಇದೀಗ ಪೊಲೀಸರು ಆತನ ಹೆಡೆಮುರಿಕಟ್ಟಿದ್ದು,  ಮಹಿಳಾ ಭಕ್ತೆಯ ಮನೆಯಲ್ಲಿ ಅಡಗಿ ಕುಳಿತಿದ್ದ ದೇವಮಾನವ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ನಗರ ಹೊರವಲಯದ ಸುಶಿಲ್‌ ಹರಿ ರೆಸಿಡೆನ್ಸಿಯಲ್‌ ಸ್ಕೂಲ್‌ ಸಂಸ್ಥಾಪಕ ಶಿವಶಂಕರ ಬಾಬಾನ ವಿರುದ್ಧ ಶಾಲೆಯ ಮಾಜಿ ವಿದ್ಯಾರ್ಥಿಗಳ ಲೈಂಗಿಕ ದುರುಪಯೋಗ, ಲೈಂಗಿಕ ಕಿರುಕುಳ, ದುರ್ವತನೆ ಆರೋಪಗಳ ಮೇಲೆ ದೂರು ದಾಖಲಾಗಿದ್ದು, ದೂರಿನ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.

ತಲೆಮರೆಸಿಕೊಂಡ ಬಳಿಕ ಮಹಿಳಾ ಭಕ್ತೆಯ ಘಾಜಿಯಾಬಾದ್‌ ನ ಮನೆಯಲ್ಲಿ ಬಾಬಾ ಆಶ್ರಯ ಪಡೆದುಕೊಂಡಿದ್ದ. ಮಹಿಳಾ ಭಕ್ತೆಯ ಮೊಬೈಲ್‌ ಸಂಖ್ಯೆಗೆ ಬರುವ ಕರೆಗಳ ಆಧರಿಸಿ ಸಿಬಿ -ಸಿಐಡಿ ತಂಡ ಆಕೆಯ ಮನೆಗೆ ತೆರಳಿ ದೇವ ಮಾನವನನ್ನು ಬಂಧಿಸಿದೆ.

ಬಾಬಾನ ಬಂಧನವಾದ ತಕ್ಷಣವೇ ಮತ್ತೊಂದು ಪೊಲೀಸರ ತಂಡ ಚೆನ್ನೈನ ಇಸಿಆರ್‌ ಪ್ರದೇಶದಲ್ಲಿರುವ ಶಾಲೆ ಗೆ ಭೇಟಿ ನೀಡಿ ಶಾಲಾ ಸದಸ್ಯರನ್ನು ವಿಚಾರಣೆ ನಡೆಸಿದೆ.

ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರಿಂದ ಸಾಲು ಸಾಲು ಆರೋಪ | ಹುಡುಗರನ್ನು ಬಿಡಲಿಲ್ಲ ಈ ಕಾಮುಕ

ಇತ್ತೀಚಿನ ಸುದ್ದಿ