ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕಗ್ಗೊಲೆ ಮಾಡಿದ ಪಾಪಿ ತಂದೆ! - Mahanayaka

ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕಗ್ಗೊಲೆ ಮಾಡಿದ ಪಾಪಿ ತಂದೆ!

mysore news
18/06/2021


Provided by

ಮೈಸೂರು: ಬೇರೆ ಜಾತಿಯ ಯುವಕನನ್ನು ಮಗಳು ಪ್ರೀತಿಸಿದಳು ಎಂದು ಪಾಪಿ ತಂದೆಯೋರ್ವ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.

18 ವರ್ಷ ವಯಸ್ಸಿನ ಗಾಯತ್ರಿ ತನ್ನ ಪಾಪಿ ತಂದೆಯಿಂದಲೇ ಹತ್ಯೆಗೀಡಾದ ಯುವತಿಯಾಗಿದ್ದಾಳೆ. ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬೀದಿಯಲ್ಲಿ ಈ ಭಯಾನಕ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮಗಳನ್ನು ಕಗ್ಗೊಲೆ ಮಾಡಿದ ಬಳಿಕ  ಪೊಲೀಸರಿಗೆ ತಂದೆ ಜಯಣ್ಣ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಹುಣಸೂರು ಡಿವೈಎಸ್ ಪಿ ರವಿ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಅದಕ್ಕಾಗಿ ಆಕೆಯನ್ನು ಕೊಂದಿರುವುದಾಗಿ ಆರೋಪಿ ತಂದೆ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ