ಸೊಪ್ಪು ತರಕಾರಿಗೆ ಕಾಲಿನಿಂದ ಒದ್ದು ಬಡವರ ಮೇಲೆ ದರ್ಪ ತೋರಿದ ಪೊಲೀಸ್ ಅಧಿಕಾರಿ - Mahanayaka

ಸೊಪ್ಪು ತರಕಾರಿಗೆ ಕಾಲಿನಿಂದ ಒದ್ದು ಬಡವರ ಮೇಲೆ ದರ್ಪ ತೋರಿದ ಪೊಲೀಸ್ ಅಧಿಕಾರಿ

rayachuru police
20/06/2021


Provided by

ರಾಯಚೂರು: ಕೊರೊನಾದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಹಕಾರ ಮಾಡುವ ಮೂಲಕ ಎಷ್ಟೋ ಪೊಲೀಸರು ಮಾದರಿಯಾಗಿದ್ದಾರೆ. ಆದರೆ, ಇಲ್ಲೊಬ್ಬ ಪಿಎಸ್ ಐ ಸೊಪ್ಪು ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರ ಮೇಲೆ ತನ್ನ ದರ್ಪ ತೋರಿದ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಪಿಎಸ್ ಐ ಅಜಂ ಎಂಬವರು ರಾಯಚೂರಿನ ಚಂದ್ರ ಮೌಳೇಶ್ವರ ವೃತ್ತದ ಬಳಿಯಲ್ಲಿ ಸೊಪ್ಪು ತರಕಾರಿ ಮಾರಾಟ ಮಾಡುತ್ತಿದ್ದವರ ಮೇಲೆ ದರ್ಪ ತೋರಿದ್ದು, ಮಾರಾಟ ಮಾಡಲು ಇರಿಸಿದ್ದ ಸೊಪ್ಪು ತರಕಾರಿಗಳನ್ನು ಕಾಲಿನಿಂದ ಒದ್ದು, ಅಮಾನವೀಯತೆ ಮೆರೆದಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲೆಯಲ್ಲಿ ಕೊರೊನಾ ವೀಕೆಂಡ್ ಲಾಕ್ ಡೌನ್ ಜಾರಿಯಲ್ಲಿದ್ದು ಇಲ್ಲಿನ ವೃತ್ತದ ಬಳಿ ಹೊಟ್ಟೆ  ಪಾಡಿಗಾಗಿ  ಕೆಲ ಹೆಂಗಸರು ತರಕಾರಿ ಮಾರುತ್ತಿದ್ದರು. ಸ್ಥಳಕ್ಕೆ ಬಂದ ಪಿಎಸ್‌ ಐ ಅಜಂ, ಬುದ್ಧಿ ಹೇಳಿ ಅವರನ್ನು ಕಳುಹಿಸುವುದು ಬಿಟ್ಟು ತರಕಾರಿಗಳಿಗೆ ಕಾಲಿನಿಂದ ಒದ್ದು ಎಸೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ