ಡೆಲ್ಟಾ ಪ್ಲಸ್ ಗೆ ದೇಶದಲ್ಲಿ ಮೊದಲ ಬಲಿ | ದೇಶದಲ್ಲಿ 50 ಪ್ರಕರಣಗಳು - Mahanayaka
7:41 PM Saturday 18 - October 2025

ಡೆಲ್ಟಾ ಪ್ಲಸ್ ಗೆ ದೇಶದಲ್ಲಿ ಮೊದಲ ಬಲಿ | ದೇಶದಲ್ಲಿ 50 ಪ್ರಕರಣಗಳು

delta plus
25/06/2021

ಮಧ್ಯಪ್ರದೇಶ: ಕೊರೊನಾ 2ನೇ ಅಲೆಗೆ ದೇಶ ತತ್ತರಿಸಿರುವ ನಡುವೆಯೇ ರೂಪಾಂತರಿ ಕೊರೊನಾ ಡೆಲ್ಟಾ ಪ್ಲಸ್ ಇದೀಗ 50 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ. ಈ ನಡುವೆ ಮಧ್ಯಪ್ರದೇಶದಲ್ಲಿ ಓರ್ವ ವ್ಯಕ್ತಿ ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದಾರೆ.


Provided by

ಡೆಲ್ಟಾ ಪ್ಲಸ್ ಗೆ ವ್ಯಕ್ತಿ ಬಲಿಯಾಗಿರುವ ವಿಚಾರವನ್ನು ಉಜ್ಜಯಿನಿಯ ನೋಡೆಲ್ ಅಧಿಕಾರಿ ಡಾ.ರೋನಕ್ ತಿಳಿಸಿದ್ದು, ಸೋಂಕಿತನ ಜೀನೋಮ್ ಟೆಸ್ಟ್ ರಿಪೋರ್ಟ್ ಬರುವುದಕ್ಕೂ ಮೊದಲು ರೋಗಿ ಸಾವನ್ನಪ್ಪಿರುವುದಾಗಿ ಅವರು ತಿಳಿಸಿದ್ದಾರೆ.  ಮಧ್ಯಪ್ರದೇಶದಲ್ಲಿ 5 ಡೆಲ್ಟಾ ಪ್ಲಸ್ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಇದೀಗ ಬಲಿಯಾಗಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರಿ ದೇಶದಲ್ಲಿ ಸ್ವಲ್ಪ ತಡವಾಗಿ ಪತ್ತೆಯಾದರೂ, ಅದರ ವೇಗ ಹೆಚ್ಚಿದೆ.  ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 5, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3 ಹಾಗೂ ಕರ್ನಾಟಕದಲ್ಲಿ 3  ಡೆಲ್ಟಾ ಪ್ಲಸ್ ಕೇಸ್ ಗಳು ಪತ್ತೆಯಾಗಿವೆ, ಇನ್ನುಳಿದಂತೆ ಪಂಜಾಬ್ ಹಾಗೂ ಆಂಧ್ರಪ್ರದೇಶದಲ್ಲಿ ತಲಾ 1 ಡೆಲ್ಟಾಪ್ಲಸ್ ಪ್ರಕರಣಗಳ ಪತ್ತೆಯಾಗಿದೆ  ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ