ಮಗನ ಸಾವಿನ ಸುದ್ದಿ ಕೇಳಿ ವೈದ್ಯೆ ಆತ್ಮಹತ್ಯೆಗೆ ಶರಣು! - Mahanayaka

ಮಗನ ಸಾವಿನ ಸುದ್ದಿ ಕೇಳಿ ವೈದ್ಯೆ ಆತ್ಮಹತ್ಯೆಗೆ ಶರಣು!

doctor
26/06/2021


Provided by

ಅಜ್ಮೀರ್:  ಮಗನ ಸಾವಿನ ಸುದ್ದಿ ಕೇಳಿ ತಾಯಿ  ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಪುತ್ರ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದರೆ, ತಾಯಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜೆಎಲ್ ಎನ್ ಆಸ್ಪತ್ರೆಯಲ್ಲಿ ಇಎನ್ ಟಿ ಘಟಕದಲ್ಲಿ ಅಕ್ಷಯ್ ಕುಮಾರ್ ಅಂಕರೆ ವಿದ್ಯಾಭ್ಯಾಸ ಮಾಡುತ್ತಿದ್ದರು.  ಅಂಕರೆ ವರ್ಷವಿಡೀ ಕೊರೊನಾ ರೋಗಿಗಳು  ಹಾಗೂ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಇಂಜೆಕ್ಷನ್ ಪಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇದು ಆತ್ಮಹತ್ಯೆ ಎಂದು ಪೊಲೀಸರು ಇನ್ನೂ ದೃಢಪಡಿಸಿಲ್ಲ.

ಇನ್ನೊಂದೆಡೆ ವೈದ್ಯಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಕ್ಷಯ್ ಕುಮಾರ್ ತಾಯಿಗೆ ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತವಾಗಿದ್ದು, ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿ ಮತ್ತು ಮಗನ ಸಾವು ಪ್ರಕರಣ ಇದೀಗ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಇತ್ತೀಚಿನ ಸುದ್ದಿ