ತಾಯಿ ಸಾವನ್ನಪ್ಪಿ 4-5 ದಿನವಾದರೂ ಅಂತ್ಯಕ್ರಿಯೆ ನೆರವೇರಿಸದ ಮಗಳು! | ಕಾರಣವೇ ನಿಗೂಢ - Mahanayaka
11:55 PM Wednesday 15 - October 2025

ತಾಯಿ ಸಾವನ್ನಪ್ಪಿ 4-5 ದಿನವಾದರೂ ಅಂತ್ಯಕ್ರಿಯೆ ನೆರವೇರಿಸದ ಮಗಳು! | ಕಾರಣವೇ ನಿಗೂಢ

kolkatta
27/06/2021

ಕೋಲ್ಕತ್ತಾ: ತಾಯಿ ಮೃತಪಟ್ಟು 4-5 ದಿನಗಳು ಕಳೆದರೂ ಮಗಳು ಆಕೆಯ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡದೇ ಮನೆಯಲ್ಲಿಯೇ ಇಟ್ಟುಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಟ್ಯಾಂಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


Provided by

ಕಳೆದ ರಾತ್ರಿಯಿಂದ ಈ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಇದರಿಂದಾಗಿ ಅನುಮಾನಕ್ಕೀಡಾದ ಸ್ಥಳೀಯರು ಮನೆಗೆ ಬಂದು ನೋಡಿದ ವೇಳೆ ತಾಯಿಯ ಮೃತದೇಹದ ಬಳಿಯಲ್ಲಿ ಪುತ್ರಿ ಕುಳಿತಿರುವುದು ಕಂಡು ಬಂದಿದೆ.

ತಾಯಿ ಕೃಷ್ಣ ದಾಸ್ ಅವರು ಮೃತಪಟ್ಟು 4-5ದಿನಗಳಾಗಿರಬಹುದು ಎಂದು ಹೇಳಲಾಗಿದೆ. ಆದರೆ ಅವರ ಪುತ್ರಿ ಸೋಮದಾಸ್ ಎಂಬವರು ಮೃತದೇಹವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ. ಅವರು ಯಾಕೆ ಮೃತದೇಹವನ್ನು ಮನೆಯಲ್ಲಿಟ್ಟುಕೊಂಡಿದ್ದರು ಎನ್ನುವ ವಿಚಾರ ತಿಳಿದು ಬಂದಿಲ್ಲ. ಆದರೆ,  ಕೋಲ್ಕತ್ತಾ ಪಾರ್ಕ್ ಸ್ಟ್ರೀಟ್ ಪ್ರದೇಶದ ರಾಬಿನ್ಸನ್ ಬೀದಿಯಲ್ಲಿ ಇಂತಹದ್ದೇ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿತ್ತು ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.

ಸದ್ಯ ಸ್ಥಳೀಯರ ಮಾಹಿತಿಯ ಮೇರೆಗೆ  ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣದಾಸ್ ಅವರ ಸಾವಿಗೆ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ. ಜೊತೆಗೆ ಮಗಳು, ತಾಯಿಯ ಸಾವಿನ ಸುದ್ದಿಯನ್ನು ಯಾಕೆ ಮುಚ್ಚಿಟ್ಟಳು ಎನ್ನುವುದು ಕೂಡ ಇನ್ನೂ ತಿಳಿದು ಬಂದಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯಿಂದ ಘಟನೆಯ ವಿವರಗಳು ತಿಳಿದು ಬರಬೇಕಿದೆ.

ಇತ್ತೀಚಿನ ಸುದ್ದಿ