ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಹೋಗಿದ್ದ ನಾಲ್ವರು ಯುವಕರು ಸಮುದ್ರಪಾಲು! - Mahanayaka
9:14 AM Thursday 16 - October 2025

ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಹೋಗಿದ್ದ ನಾಲ್ವರು ಯುವಕರು ಸಮುದ್ರಪಾಲು!

drowne in sea
28/06/2021

ಶ್ರೀಕಾಕುಳಂ: ಸ್ನೇಹಿತನ ಹುಟ್ಟು ಹಬ್ಬ ಆಚರಣೆಯ ಸಂಭ್ರಮದಲ್ಲಿದ್ದ ನಾಲ್ವರು ಯುವಕರು ಸಮುದ್ರಪಾಲಾಗಿರುವ ಘಟನೆ ಪುಕ್ಕಳ್ಲಪಾಲೆಂ ಸಮುದ್ರ ತೀರದಲ್ಲಿ ನಡೆದಿದ್ದು,  18 ಸ್ನೇಹಿತರ ಪೈಕಿ ನಾಲ್ವರು ಸಮುದ್ರಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.


Provided by

ಬೊರ್ರಪುಟ್ಟಗ ನಿವಾಸಿ ಸಾಯಿ ಲೋಕೇಶ್ ಎಂಬವರ ಹುಟ್ಟು ಹಬ್ಬದ ಆಚರಣೆಗೆ ಸುಮಾರು 18 ಸ್ನೇಹಿತರು ಪುಕ್ಕಳ್ಲಪಾಲೆಂ ಸಮುದ್ರ ತೀರಕ್ಕೆ ಬಂದಿದ್ದರು. ಸಮುದ್ರ ತೀರದಲ್ಲಿ ಆಹಾರ ಸೇವಿಸಿದ ಬಳಿಕ ಕೆಲವರು ಸೆಲ್ಫಿ ತೆಗೆಯಲು  ಸಮುದ್ರದ ಒಳಭಾಗಕ್ಕೆ ಹೋಗಿದ್ದಾರೆ. ಈ ವೇಳೆ  ಸಮುದ್ರದ ಅಲೆಯ ರಭಸಕ್ಕೆ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ.

20 ವರ್ಷ ವಯಸ್ಸಿನ ಸಾಯಿ ಲೋಕೇಶ್, 17 ವರ್ಷ ವಯಸ್ಸಿನ ತಿರುಮಲ, 21 ವರ್ಷ ವಯಸ್ಸಿನ ಮನೋಜ್ ಮತ್ತು  ಗೋಪಿಚಂದ್ ಎಂಬವರು ಸಮುದ್ರಪಾಲಾಗಿದ್ದು, ಶ್ರೀರಾಮ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸದ್ಯ ಸಮುದ್ರಪಾಲಾದವರ ಪೈಕಿ ಮೂವರ ಮೃತದೇಹಗಳು ಪತ್ತೆಯಾಗಿದ್ದು,  ಮತ್ತೊಬ್ಬ ಯುವಕ ಗೋಪಿಚಂದ್ ನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟ ಯುವಕರೆಲ್ಲರೂ ಒಂದೇ ಗ್ರಾಮದವರಾಗಿರುವುದರಿಂದ ಅವರ ಗ್ರಾಮದಲ್ಲಿ ಇದೀಗ ಶೋಕ ಮಡುಗಟ್ಟಿದೆ.

ಇತ್ತೀಚಿನ ಸುದ್ದಿ